
ಕಲಬುರಗಿ,ನ.17: ಚೆಸ್ ಕುಟಿರ ಅಕಾಡೆಮಿ ವತಿಯಿಂದ ನ. 15ರಂದು ಕಲಬುರಗಿಯ ಶ್ರದ್ಧಾ ಮಾಲ್ನಲ್ಲಿ ಆಯೋಜಿಸಲಾಗಿದ್ದ ಚೆಸ್ ಕುಟಿರ ಅಕಾಡೆಮಿ ಮುಕ್ತ ಮತ್ತು 17 ವರ್ಷದೊಳಗಿನ ರ್ಯಾಪಿಡ್ ಚೆಸ್ ಪಂದ್ಯಾವಳಿ
2026ಯಲ್ಲಿ ಒಟ್ಟು 219 ಆಟಗಾರರು ಉತ್ಸಾಹದಿಂದ ಭಾಗವಹಿಸಿದ್ದರು.
ಪಂದ್ಯಾವಳಿಯಲ್ಲಿ ಮುಕ್ತ ವಿಭಾಗದಲ್ಲಿ 49 ಆಟಗಾರರು ಹಾಗೂ 17 ವರ್ಷದೊಳಗಿನ ವಿಭಾಗದಲ್ಲಿ 170 ಆಟಗಾರರು ಸ್ಪರ್ಧಿಸಿದ್ದರು. ಆಂಧ್ರಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಟಗಾರರು ಆಗಮಿಸಿ ತಮ್ಮ ಚದುರಂಗದ ಕೌಶಲ್ಯವನ್ನು ಪ್ರದರ್ಶಿಸಿದರು. ಪಂದ್ಯಾವಳಿಯಲ್ಲಿ ಒಟ್ಟು ರೂ 40 ಸಾವಿರ ನಗದು ಬಹುಮಾನಗಳನ್ನು ವಿತರಿಸಲಾಯಿತು. ವಿವಿಧ ವಯೋಮಾನದ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಬಹುಮಾನಗಳು ಹಾಗೂ ಟ್ರೋಫಿಗಳನ್ನು ನೀಡಲಾಯಿತು.
ಮುಕ್ತ ವಿಭಾಗದಲ್ಲಿ ಆಂಧ್ರಪ್ರದೇಶದ ಮೊಹಮ್ಮದ್ ಖಾಜಾ ಅಬ್ದುಲ್ ಲತೀಫ್ ಎಸ್. ಪ್ರಥಮ ಸ್ಥಾನ ಪಡೆದು ರೂ.10,100 ನಗದು ಬಹುಮಾನ ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು. ಆಂಧ್ರಪ್ರದೇಶದ ಮಮಿಲ್ಲಾ ಯುಗಂಧರ್ ದ್ವಿತೀಯ ಸ್ಥಾನ ಪಡೆದು ರೂ.5,100 ನಗದು ಬಹುಮಾನ ಹಾಗೂ ಟ್ರೋಫಿ ಪಡೆದರು. ಕಲಬುರಗಿಯ ಡಾ. ಸಿದ್ಧಾಂತ್ ಧಾರವಾಡ ತೃತೀಯ ಸ್ಥಾನ ಪಡೆದು ರೂ2,250 ನಗದು ಬಹುಮಾನ ಹಾಗೂ ಟ್ರೋಫಿ ಗೆದ್ದರು. ಕಲಬುರಗಿಯ ವರುಣ್ ದೇಸಾಯಿ ನಾಲ್ಕನೇ ಸ್ಥಾನ ಪಡೆದು ರೂ.1,750 ಹಾಗೂ ಪ್ರದೀಪ್ ಪಾಟೀಲ್ ಐದನೇ ಸ್ಥಾನ ಪಡೆದು ?1,250 ನಗದು ಬಹುಮಾನ ಪಡೆದರು.
17 ವರ್ಷದೊಳಗಿನ ವಿಭಾಗದಲ್ಲಿ ಕಲಬುರಗಿಯ ವೇದಾಂತ್ ಶರಣಬಸಪ್ಪ ಸದ್ದು ಪ್ರಥಮ ಸ್ಥಾನ ಪಡೆದು ರೂ.5,100 ನಗದು ಬಹುಮಾನ ಗೆದ್ದರು. ಆಂಧ್ರಪ್ರದೇಶದ ಕಂದ್ಲಾವತ್ ಮನ್ವಿತ್ ನಾಯಕ್ ದ್ವಿತೀಯ ಸ್ಥಾನ ಪಡೆದು ರೂ2,250 ಪಡೆದರು. ಕಲಬುರಗಿಯ ಸಾತ್ವಿಕ್ ಬಿ.ಕೆ. ತೃತೀಯ ಸ್ಥಾನ ಪಡೆದು ರೂ.1,300, ಯಾದಗಿರಿ ಜಿಲ್ಲೆಯ ಶಹಾಪುರದ ಅಭಿರುಚಿ ನಾಲ್ಕನೇ ಸ್ಥಾನ ಪಡೆದು ರೂ.1,250 ಹಾಗೂ ಕಲಬುರಗಿಯ ಬರುಣ್ ಪಿ. ಹೆಬ್ಳೆ ಐದನೇ ಸ್ಥಾನ ಪಡೆದು ರೂ.1,100 ನಗದು ಬಹುಮಾನ ಪಡೆದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲಬುರಗಿಯ ಶ್ರೀ ವೆಂಕಟೇಶ್ ಆಟೋಮೋಟಿವ್ ಸಂಸ್ಥೆಯ ಮಾಲೀಕ ಕೃಷ್ಣಾಜಿ ಕುಲಕರ್ಣಿ ಭಾಗವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಶರಣು ಶಾಸ್ತ್ರಿ, ಕುಟಿರಾ ಸ್ಪೋಟ್ರ್ಸ್ ಅಂಡ್ ಎಜುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ್, ವೀರಶೈವ ಲಿಂಗಾಯತ ಮಹಾಸಭಾ ಸಮಿತಿ ಸದಸ್ಯಸುನೀಲ್ ಬಿ. ಹಳ್ಳಿ, ನಿವೃತ್ತ ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ಮಲ್ಲಪ್ಪ ರಾಚಪ್ಪ ಸಜ್ಜನ್ ಹಾಗೂ ಕಲಬುರಗಿಯ ಶಹಾಬಜಾರ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುಧಾಕರ್ ಲಿಂಬೋಜಿ ರಾಥೋಡ್ ಉಪಸ್ಥಿತರಿದ್ದರು.ನಿರೂಪಣೆಯನ್ನು ಡಿ.ಎನ್. ಪಾಟೀಲ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.ಪಂದ್ಯಾವಳಿಯ ತಾಂತ್ರಿಕ ನಿರ್ವಹಣೆಯನ್ನು ಮುಖ್ಯ ತೀರ್ಪುಗಾರರಾದ ಎಫ್.ಎ. ಓಂಕಾರ್ ಎಸ್. ದಂಡೋತಿ ಅವರ ನೇತೃತ್ವದಲ್ಲಿ ನಡೆಸಲಾಯಿತು. ಉಪಮುಖ್ಯ ತೀರ್ಪುಗಾರರಾಗಿ ಎಫ್.ಎ. ಸಚಿನ್ ಭರಣಿ ಕಾರ್ಯನಿರ್ವಹಿಸಿದರು. ತೀರ್ಪುಗಾರರಾಗಿ ಗಿರೀಶ್ ರೆಡ್ಡಿ ಹಾಗೂ ಅಮಿತಾನಂದ ಕೋರೆ ಪಂದ್ಯಾವಳಿಯ ಸುಗಮ ನಿರ್ವಹಣೆಗೆ ಸಹಕರಿಸಿದರು.ಚೆಸ್ ಕುಟಿರಾ ಅಕಾಡೆಮಿಯ ಸಂಸ್ಥಾಪಕ ಹಾಗೂ ನಿರ್ದೇಶಕ ವಿನುತ್ ಸಜ್ಜನ್ ಅವರ ನೇತೃತ್ವದಲ್ಲಿ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

















