
ಜೇವರ್ಗಿ,ನ.16-ಪಟ್ಟಣದ ಲಕ್ಕಪ್ಪ ಲೇಔಟ್ ಬಡವಾಣಿ ನಿವಾಸಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಲಪ್ಪ ಮಾರಡಗಿ ಎಂಬುವರ ಮನೆ ಕಳ್ಳತನವಾಗಿದೆ.
ಸುಮಾರು 9 ಮಾಸಿ ಬಂಗಾರ ಹಾಗೂ 1ಲಕ್ಷ ಹಣ ಮತ್ತು ಬಟ್ಟೆ ಹಾಗೂ ಇತರ ವಸ್ತುಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಮಯ ಸಾಧಿಸಿದ ಕಳ್ಳರು ಮನೆಯ ಬಾಗಿಲು ಕಿಟಕಿ ಮುರಿದು ಒಳಗಡೆ ಹೋಗಿ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಜೇವರ್ಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.


















