
ಕಲಬುರಗಿ: ನಗರದ ಸರಕಾರಿ ಶಿಕ್ಷಣ ಶಿಕ್ಷಕರ ಮಹಾವಿದ್ಯಾಲಯದಲ್ಲಿ ಗೋಡೆಗಳಿಗೆ ವಿದ್ಯಾರ್ಥಿಗಳಿಂದ ಸುಣ್ಣ-ಬಣ್ಣ ಬಳಿಸಿರುವುದನ್ನು ಮತ್ತು ಗ್ರೀಲ್ಗಳಿಗೆ ಪೇಂಟಿಂಗ್ ಮಾಡಿಸಿರುವುದನ್ನು ಖಂಡಿಸಿ ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಅಮಾನತ್ತು ಮಾಡಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಾವಿದ್ಯಾಲಯದ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ವೇದಿಕೆ ರಾಜ್ಯಾಧ್ಯಕ್ಷ ಶಿವಲಿಂಗ ಹಳಿಮನಿ, ಜಿಲ್ಲಾ ಅಧ್ಯಕ್ಷ ಸಂದೀಪ ಭರಣಿ, ಸತೀಶ್ ಕಡೂನ್, ವಿಶ್ವನಾತ ಡೇಕೂನ್, ಪಪ್ಪು ಕಾಳೆ, ಶರಣು ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


















