
ಕಲಬುರಗಿ,ನ.12-ನಗರದ ಹುಮನಾಬಾದ ರಿಂಗ್ ರಸ್ತೆ ಹತ್ತಿರ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್ಐ ಶಶಿಕಲಾ, ಸಿಬ್ಬಂದಿಗಳಾದ ಪುಂಡಲಿಕ, ರಾಜಕುಮಾರ, ಗುಂಡುರಾಯ, ಅಶೋಕ ಅವರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ.
ರಾಜಕುಮಾರ ಹುಳಗೇರಿ, ವೀರೇಶ ಕಡಬುರ, ರಾಜಶೇಖರ ಪೂಜಾರಿ, ಶ್ರೀಕಾಂತ ಸೂರ್ಯವಂಶಿ, ಹನೀಫ್ ಮತ್ತು ಅಮರನಾಥ ಎಂಬುವವರನ್ನು ಬಂಧಿಸಿ 9110 ರೂ.ನಗದು ಮತ್ತು ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















