Home ಜಿಲ್ಲೆ ಕಲಬುರಗಿ ವೀರವನಿತೆ ಒನಕೆ ಓಬವ್ವರ ಸಾಹಸ, ಧೈರ್ಯ ಸ್ಮರಣೀಯ

ವೀರವನಿತೆ ಒನಕೆ ಓಬವ್ವರ ಸಾಹಸ, ಧೈರ್ಯ ಸ್ಮರಣೀಯ

ಕಲಬುರಗಿ, ನ 12: ಕನ್ನಡ ನಾಡಿನ ವೀರವನಿತೆ ಒನಕೆ ಓಬವ್ವ ಅವರ ಸಾಹಸ, ಧೈರ್ಯ ಮತ್ತು ದೇಶಭಕ್ತಿಯನ್ನು ಸ್ಮರಿಸಬೇಕು ಎಂದು ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದ ಸೈಕಾಲಜಿಸ್ಟ್ ಕೋನ್ಸೆಲರ್ ಮಂಜುನಾಥ್ ಕಂಬಾಳಿಮಠ ಅವರು ಕರೆ ನೀಡಿದರು. ಓಬವ್ವ ಅವರ ಜೀವನವು ಜನರಿಗೆ ಸ್ಫೂರ್ತಿ ನೀಡುವಂತದ್ದಾಗಿದ್ದು, ಆ ಚೈತನ್ಯವನ್ನು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರ ಕೊಠಡಿಯಲ್ಲಿ ವೀರ ವನಿತೆ ಓನಿಕೆ ಓಬವ್ವ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರು ಡಾ. ರೂಕೀಯ ಆಸ್ನಾ ರಬಾ ಮತ್ತು ಡಾ.ಓಂ ಪ್ರಕಾಶ್ ಅಂಬೂರೆ ಅವರ, ನೇತೃತ್ವದಲ್ಲಿ. ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
ನಂತರ ಅವರು ಮಾತನಾಡುತ್ತ ಓಬವ್ವ ಸಂದೇಶ ಇಂದಿಗೂ ಸಜೀವ ಒನಕೆ ಓಬವ್ವ ಅವರು ಚಿತ್ರದುರ್ಗದ ಕೋಟೆ ಮತ್ತು ಜನರನ್ನು ಅಪಾಯದಿಂದ ಪಾರು ಮಾಡಿದ ಅಸಾಮಾನ್ಯ ಸಾಹಸಿಯಾಗಿದ್ದರು. ಅವರ ನಿಷ್ಕಲ್ಮಷ ನಾಡಭಕ್ತಿ, ಧೈರ್ಯ ಮತ್ತು ತ್ಯಾಗದ ಕಥೆ ಇಂದಿಗೂ ಯುವಜನರಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರು ಡಾ. ರೂಕೀಯ ಆಸ್ನಾ ರಬಾ ಅವರು ಮಾತನಾಡಿದರು.
ಓಬವ್ವ ಅವರ ಜಯಂತಿಯನ್ನು ಕೇವಲ ಸಮಾರಂಭವಾಗಿ ಆಚರಿಸದೆ, ಅವರ ಆದರ್ಶಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದರ್ಭವಾಗಿ ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ. ಓ ಪಿ ಡಿ ಸರ್ಜನ್ ಡಾ. ರಾಘುನಾಥ್ ಕುಲಕರ್ಣಿ, ಸ್ಥಳೀಯ ವೈದ್ಯಾಧಿಕಾರಿ ಗಳಾದ ಡಾ. ಓಂ ಪ್ರಕಾಶ ಅಂಬೂರೆ, ಡಾ. ಸಂತೋಷ ಕಟ್ಟಿಮನಿ, ಕಚೇರಿ ಸಹಾಯಕ ಆಡಳಿತ ಅಧಿಕಾರಿ ಅಂಬಾರಾಯ ಸಂಕಾ, ಕಚೇರಿ ಅಧೀಕ್ಷಕಿ ಸಂಗೀತಾ, ಪ್ರಥಮ ದರ್ಜೆ ಸಹಾಯಕರಾದ ಹನುಮಂತರಾಯ ಅವರಾದಿ, ಕಾವ್ಯ ಅಂಜುಟಗಿ, ಶೀಬಾ ರಾಣಿ, ಲೆಕ್ಕಪರಿಶೋಧಕ ಸಿದ್ದಪ್ಪ ಹಾಲಪನೂರ, ಗಣಕ ಸಹಾಯಕರಾದ ಅವಿನಾಶ್ ಪಾಟೀಲ, ಸುರೇಖಾ ದಿವಾಟಾಗಿ, ಮರಿಗೆಯ್ಯ ಶಾಕಿ, ಪೃಥ್ವಿ ಇತರರು ಉಪಸ್ಥಿತರಿದ್ದರು.