
ಕಲಬುರಗಿ: ಮಧ್ವಾಚಾರ್ಯರ ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿರೋದನ್ನ ಸ್ವಾಗತಿಸಿರುವ ಉತ್ತರಾದಿ ಮಠಾಧೀಶರಾದ ಸತ್ಯಾತ್ಮ ತೀರ್ಥ ಶ್ರೀಗಳು, ಕಲಬುರಗಿಯಲ್ಲಿ ಭಕ್ತರು ಸಲ್ಲಿಸಿದ ಈ ಮನವಿಗೆ ತಕ್ಷಣ ಸ್ಪಂದಿಸಿರುವ ಸರ್ಕಾರದ ನಡೆಯನ್ನು ಶ್ಲಾಘಿಸಿದ್ದಾರೆ.
ಹುಬ್ಬಳ್ಳಿಯಲ್ಲಿರುವ ಶ್ರೀಗಳು ದೂರವಾಣಿ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರೊಂದಿಗೆ ಮಾತನಾಡಿದ್ದು, ತ್ರೈಲೋಕ್ಯಾಚಾರ್ಯರಾಗಿರುವ ಮಧ್ವಾಚಾರ್ಯರ ಜಯಂತಿ ಆಚರಣೆಗೆ ಅಧಿಕೃತ ಆದೇಶ ಹೊರಡಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಈ ದೂರವಾಣಿ ಮಾತುಕತೆ ಸಂದರ್ಭದಲ್ಲಿ ಮಧ್ವಾಚಾರ್ಯರ ಜಯಂತಿಯನ್ನು ಆಚರಿಸಲು ಮಹತ್ವದ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿಗಳಾದಡಿಕೆ ಶಿವಕುಮಾರ್ ಅವರಿಗೂ, ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರಿಗೂ ಶ್ರೀಗಳು ಅಭಿನಂದಿಸಿ ಆಶಿರ್ವದಿಸಿದ್ದಾರೆ.























