Home ಜಿಲ್ಲೆ ಕಲಬುರಗಿ ಬೀದಿ ವ್ಯಾಪಾರಿಗಳ ಸಂಘದಿಂದ ನವರಾತ್ರಿ ಉತ್ಸವ-ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ

ಬೀದಿ ವ್ಯಾಪಾರಿಗಳ ಸಂಘದಿಂದ ನವರಾತ್ರಿ ಉತ್ಸವ-ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ, ಅ.21- ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಡದೇವಿಯ ಕೃಪೆ ಮತ್ತು ಆಶಿರ್ವಾದಿಂದ ಬೀದಿ ವ್ಯಾಪಾರಿಗಳ ಸಂಘ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ನಾಡ ದೇವಿ ಸರ್ವರಿಗೂ ಆರೋಗ್ಯ ಆಯುಷ್ಯ ಮತ್ತು ಸಂಪತನ್ನು ದಯಪಾಲಿಸಲಿ ಎಂದು ಬೀದಿವ್ಯಾಪಾರಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಶುಭ ಹಾರೈಸಿದರು.
ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ನಗರದ ಜಗತ್ ವೃತ್ತ ಅತ್ತರಕಂಪೌಂಡ್ ಗಾಜೀಪೂರದ ಸೂರ್ಯವಂಶಿ ಅವರ ನಿವಾಸದಲ್ಲಿ ಆಯೋಜಿಸಿದ್ದ ನಾಡ ಹಬ್ಬ ಸದರಾ ನವರಾತ್ರಿ ಉತ್ಸವ, ಸೇವಾ ರತ್ನ ಪ್ರಶಸ್ತಿ ಪ್ರದಾನ ಮತ್ತು ಮಹಾಪ್ರಸಾದ ವಿತರಣೆ ಕಾರ್ಯಕ್ರಮದ ನೆತೃತ್ವ ವಹಿಸಿ ಮಾತನಾಡಿದ ಅವರು, ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಹಾಗೂ ಅವರ ಹಕ್ಕುಗಳ ರಕ್ಷಣೆಗಾಗಿ ಸಂಘ ಮುಂಚೂಣಿಯಲ್ಲಿ ನಿಂತು ಹೋರಾಟ ಕೈಗೊಳ್ಳುತ್ತದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಎಲ್ಲ ಸಮುದಾಯವನ್ನು ವಿಶ್ವಾಶಕ್ಕೆ ತೆಗೆದುಕೊಂಡು ಇಂತಹ ವಿಶೇಷ ಕಾರ್ಯಕ್ರಮವನ್ನು ಆಯೋಸುತ್ತಿರುವ ಸೂರ್ಯವಂಶಿ ಅವರು, ಹಲವಾರು ದಶಕಗಳಿಂದ ಬೀದಿ ವ್ಯಾಪಾರಿಗಳಿಗೆ ನ್ಯಾಯಕಲ್ಪಿಸಲು ಶ್ರಮಿಸುತ್ತಿದ್ದಾರೆ ಅವರ ಈ ಜನಪರ ಕಾಳಜಿ ಮತ್ತು ಸೇವೆಗೆ ತಾಯಿ ಜಗದಂಭದೇವಿ ಅನುಗ್ರಹ ನೀಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರು ಮತ್ತು ಸಂಘದ ರಾಜ್ಯ ಉಪಾಧ್ಯಕ್ಷರಾಧ ಭವಾನಿಸಿಂಗ ಠಾಕೂರ ಮಾತನಾಡಿ, ಮಳೆ ಬಿಸಿಲು ಎನ್ನದೇ ಬೀದಿ ವ್ಯಾಪಾರಿಗಳ ತಮ್ಮ ಕಾಯಕವನ್ನು ಮುಂದುವರೆಸುವ ಮೂಲಕ ನಮ್ಮೇಲ್ಲರಿಗೂ ಅಗತ್ಯ ಮನೆ ಬಳಕೆಯ ತಿನಸಿ ಮತ್ತು ವಸ್ತುಗಳನ್ನು ನೀಡುತ್ತಾರೆ ಅವರ ಸೇವೆಗೆ ಮಾನ್ಯತೆ ಮತ್ತು ನ್ಯಾಯ ಕಲ್ಪಿಸಲು ಸಂಘ ಕಟಿ ಬದ್ಧವಾಗಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರಾದ ಹಿರಿಯ ಪತ್ರಕರ್ತ ಭೀಮಾಶಂಕರ ಫೀರೋಜಾಬಾದ, ಸಂಗನಾಥ ಹಿರೇಮಠ, ಚಂದ್ರಶೇಖರ ನಾಗನಹಳ್ಳಿ, ನ್ಯಾಯವಾದಿಗಳಾದ ಪ್ರಕಾಶ ಸಿಂಗರ, ಕೆಪಿ ಬಿರಾದಾರ, ಸುಧೀಂದ್ರ ಯಕ್ಕಂಚಿ, ನಿವೃತ್ತ ಪೊಲೀಸ ಅಧಿಕಾರಿ ನಾಗಭೂಷಣ, ಹರಿಬಾ ಜಮಾದಾರ, ಬಸವರಾಜ, ಅಶೋಕ ಗಾಯಕವಾಡ, ವಿಶ್ವನಾಥ ಜಾಧವ, ಅರವಿಂದಕರ ಅವರನ್ನು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಭೀಮರೆಡ್ಡಿ ಪಾಟೀಲ, ಡಾ.ಮೈನೋದ್ಧೀನ, ನ್ಯಾಯವಾದಿ ಕೆಎ ಕಲಬುರ್ಗಿ, ಶಾಮ ನಾಟಿಕರ, ರಾಜು ವಾಡೇಕರ್, ರವಿ ರಾಠೋಡ, ಶೇಖರಸಿಂಗ್, ಕೆಪಿ ಬಿರಾದಾರ, ಡಾ.ರೆಡ್ಸನ್ ಸೇರಿದಂತೆ ಗಣ್ಯಮಾನ್ಯರು ಪಾಲ್ಗೊಂಡಿದ್ದರು.
ಸಂಘದ ಪದಾಧಿಕಾರಿಗಳಾದ ಅಮೃತ ಸಿ.ಪಾಟೀಲ ಸಿರನೂರ, ರವಿ ಒಂಟಿ, ಜಗತ್ ಸಿಂಗ್, ಮಹಿಬೂಬ ಶಹಾ ದರವೇಜ, ಚಂದ್ರಾಹಸ ಜೀತ್ರೆ, ಸುಮಾ ಕವಲಗಾ, ಬಾಬು ಪರೀಟ್ ಮತ್ತು ಲೋಹಿಸ ಕೋರಿ, ದತ್ತು ಭಾಸಗಿ ಸೇರಿದಂತೆ ಹಲವರಿದ್ದರು.