Home ಜಿಲ್ಲೆ ಕಲಬುರಗಿ ಒಪಿಡಿ ಕೌಂಟರ್‍ನಲ್ಲಿಟ್ಟಿದ್ದ 1 ಲಕ್ಷ ರೂ.ನಗದು ಕಳವು

ಒಪಿಡಿ ಕೌಂಟರ್‍ನಲ್ಲಿಟ್ಟಿದ್ದ 1 ಲಕ್ಷ ರೂ.ನಗದು ಕಳವು

ಕಲಬುರಗಿ,ಅ.15-ಹಲ್ಲಿನ ಆಸ್ಪತ್ರೆಯೊಂದರ ಒಪಿಡಿ ಕೌಂಟರ್‍ನಲ್ಲಿ ಇಟ್ಟಿದ್ದ 1 ಲಕ್ಷ ರೂ.ನಗದು ಹಣ ಕಳವಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಬೀಜ್ ಉರ್ ರೆಹೇಮಾನ್ ಅವರು ನಗರದ ಸಂತ್ರಾಸವಾಡಿಯ ಸಿಟಿ ಬಸ್ ನಿಲ್ದಾಣದ ಎದುರುಗಡೆಯ ಅಪಾರ್ಟ್‍ಮೆಂಟ್ ಒಂದರಲ್ಲಿ ಡೆಂಟಲ್ ಕ್ಯೂರ್ ಎಂಬ ಹೆಸರಿನ ಹಲ್ಲಿನ ಆಸ್ಪತ್ರೆ ನಡೆಸುತ್ತಿದ್ದು, ಇವರು ಅ.12 ರಂದು ಮಧ್ಯಾಹ್ನ ನಮಾಜ್ ಮಾಡಲು ಪತ್ನಿಯೊಂದಿಗೆ ಮನೆಗೆ ಹೋಗುವಾಗ 1 ಲಕ್ಷ ರೂಪಾಯಿ ನಗದು ಹಣವನ್ನು ಆಸ್ಪತ್ರೆಯ ಒಪಿಡಿ ಕೌಂಟರ್‍ನಲ್ಲಿ ಇಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮನೆಗೆ ಹೋಗಿ ಮರಳಿ ಆಸ್ಪತ್ರೆಗೆ ಬರುವುದರೊಳಗೆ ಕಳ್ಳರು ಆಸ್ಪತ್ರೆಯ ಅಲುಮಿನಿಯಂ ಬಾಗಿಲು ಮುರಿದು ಒಪಿಡಿ ಕೌಂಟರ್‍ನಲ್ಲಿಟ್ಟಿದ್ದ 1 ಲಕ್ಷ ರೂ.ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.