Home ಜಿಲ್ಲೆ ಕಲಬುರಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ; ಸಾರ್ವಜನಿಕರಿಗೆ ಆರೋಗ್ಯ ಸೇವೆ

ಉಚಿತ ಆರೋಗ್ಯ ತಪಾಸಣೆ ಶಿಬಿರ; ಸಾರ್ವಜನಿಕರಿಗೆ ಆರೋಗ್ಯ ಸೇವೆ

ಕಲಬುರಗಿ,ಅ.7: ಕರ್ನಾಟಕ ಯುವ ಶಕ್ತಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಮಾರುತಿ ಎಂ. ಕಮ್ಮಾರ ಅವರ ಜನ್ಮದಿನದ ಅಂಗವಾಗಿ ಜಗದೀಶ್ ಕಮ್ಮಾರ ಅವರ ನೇತೃತ್ವದಲ್ಲಿ ಮನೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಸೋಮವಾರ ವೀರೇಂದ್ರ ಪಾಟೀಲ ಬಡಾವಣೆಯ ನಂದಿ ಬಸವೇಶ್ವರ ದೇವಸ್ಥಾನದ ಮೂರನೇ ಬ್ಲಾಕ್‍ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ , ಜ್ವರ, ತಲೆನೋವು, ಆಯಾಸ, ವಾಂತಿ, ಹೊಟ್ಟೆ ನೋವು, ತಲೆಸುತ್ತುವಿಕೆ, ಕಾಲುಗಳಲ್ಲಿ ಬಾವು ಸೇರಿದಂತೆ ಹೃದಯ, ಮೂತ್ರಪಿಂಡ, ಮೂಳೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ ನಡೆಸಲಾಯಿತು. ತಪಾಸಣೆಯ ಬಳಿಕ ವೈದ್ಯರು ಅಗತ್ಯವಿರುವವರಿಗೆ ಸೂಕ್ತ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡಿದರು. ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.
ಮನೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಐಮನ್ (ಜನರಲ್ ಮೆಡಿಸಿನ್), ಡಾ. ಹುಜೆಫಾ (ಜನರಲ್ ಫಿಸಿಷಿಯನ್), ಡಾ. ಸಾಗರ್ ಕಟಾರೆ (ಜನರಲ್ ಸರ್ಜನ್), ಡಾ. ಬಸವರಾಜ್ (ಜನರಲ್ ಫಿಸಿಷಿಯನ್) ಹಾಗೂ ಡಾ. ಜಫರ್ (ಆರ್ಥೋಪೆಡಿಕ್ಸ್) ಅವರು ಶಿಬಿರದಲ್ಲಿ ಭಾಗವಹಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸಾ ಸಲಹೆ ನೀಡಿದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರೂಕ್ ಮನೂರ್ ಅವರು ಶಿಬಿರದ ವ್ಯವಸ್ಥೆಗೆ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಮಾರುತಿ ಎಂ. ಕಮ್ಮಾರ ಅವರ ಧರ್ಮಪತ್ನಿ ಸಂಗೀತಾ ಎಂ. ಕಮ್ಮಾರ, ವೀರೇಂದ್ರ ಪಾಟೀಲ ಬಡಾವಣೆಯ ನಂದಿ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಅಣ್ಣಾರಾವ ಮಠಪತಿ, ಸಚಿನ್ ಕಡಗಂಚಿ. ಮಂಜುನಾಥ್ ಚಿಲ್ಶೆಟ್ಟಿ, ಶರಣು ಸೀಗಿ, ರಾಮಚಂದ್ರ, ಪರಶುರಾಮ, ಮಂಜುನಾಥ್ ಕಮ್ಮಾರ್, ಶಂಭುಲಿಂಗ ಮಠಪತಿ, ಚಂದ್ರಕಾಂತ್ ಪಾಟೀಲ್, ರಾಚಯ್ಯ ಸ್ವಾಮಿ, ಮೌನೇಶ ಎಂ ಕಮ್ಮಾರ ನಾಗರಾಜ ಪಂಚಾಳ ಧರ್ಮರಾಜ ಸೇರಿದಂತೆ ಬಡಾವಣೆಯ ಹಿರಿಯ ಮುಖಂಡರು, ಕಮ್ಮಾರ ಪರಿವಾರದ ಸದಸ್ಯರು, ಸ್ನೇಹಿತರು ಹಾಗೂ ಅಕ್ಕ-ತಂಗಿಯರು ಭಾಗವಹಿಸಿದ್ದರು.
ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅಗತ್ಯವಿರುವವರಿಗೆ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮಾರುತಿ ಎಂ. ಕಮ್ಮಾರ ಹೇಳಿದರು.