
ಕಲಬುರಗಿ,ಅ.7: ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ “ಏಕ್ ಭಾರತ್-ಶ್ರೇಷ್ಠ ಭಾರತ್ ಉಪಕ್ರಮದಡಿ ಆಯೋಜಿಸಲಾದ ಯುವ ಸಂಗಮದ 7ನೇ ಹಂತದ ಕರ್ನಾಟಕ ಪ್ರವಾಸವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 3 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ 51 ಸದಸ್ಯರ ನಿಯೋಗ ಭಾಗವಹಿಸಿತು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ವು ಕರ್ನಾಟಕದ ಪ್ರವಾಸದ ಆತಿಥ್ಯವನ್ನು ವಹಿಸಿತ್ತು.
ಕರ್ನಾಟಕದ ಸಾಂಸ್ಕøತಿಕ ಪರಂಪರೆ, ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಸಾಂಪ್ರದಾಯಿಕ ಕಲೆ ಹಾಗೂ ಕೃಷಿ ಕ್ಷೇತ್ರಗಳ ಪರಿಚಯ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಜೊತೆಗೆ, ಕರ್ನಾಟಕ ಮತ್ತು ಮಧ್ಯಪ್ರದೇಶದ ಯುವಜನರ ನಡುವೆ ಸಾಂಸ್ಕೃತಿಕ ವಿನಿಮಯ, ಪರಸ್ಪರ ತಿಳುವಳಿಕೆ ಹಾಗೂ ರಾಷ್ಟ್ರೀಯ ಏಕತೆಯ ಮನೋಭಾವವನ್ನು ಬಲಪಡಿಸಲಾಯಿತು
ಬೀದರ್: ಐತಿಹಾಸಿಕ ಪರಂಪರೆ ಮತ್ತು ಬೀದ್ರಿ ಕಲೆ :
ಬೀದರ್ ಕೋಟೆ, ಗುರುದ್ವಾರ ನಾನಕ್ ಝೀರಾ ಸಾಹೀಬ್ ಹಾಗೂ ಬೀದ್ರಿ ಕಲಾ ಕೇಂದ್ರಗಳಿಗೆ ಭೇಟಿ ನೀಡಲಾಯಿತು. ಪದ್ಮಶ್ರೀ ಪುರಸ್ಕೃತ ಖ್ಯಾತ ಬೀದ್ರಿ ಕಲಾವಿದ ಶಾ ರಶೀದ್ ಅಹಮದ್ ಖಾದ್ರಿ ಅವರೊಂದಿಗೆ ಸಂವಾದ ನಡೆÀಸಿತು. ಪ್ರವಾಸದ ಸಂದರ್ಭದಲ್ಲಿ ಬೀದರ್‍ನ ಇತಿಹಾಸ, ವಾಸ್ತುಶಿಲ್ಪ ಹಾಗೂ ಬೀದ್ರಿ ಕಲೆಯ ಪರಂಪರೆಯ ಕುರಿತು ತಿಳಿದುಕೊಳ್ಳಲಾಯಿತು.
ಬೆಂಗಳೂರು: ಶಿಕ್ಷಣ, ಆಡಳಿತ, ವಿಜ್ಞಾನ ಮತ್ತು ತಂತ್ರಜ್ಞಾನ :
ಬೆಂಗಳೂರಿನಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಬೆಂಗಳೂರು (ಐ.ಐ.ಎಂ.ಬಿ) ಹಾಗೂ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ವ್ಯವಸ್ಥೆ, ವೈಜ್ಞಾನಿಕ ಸಂಶೋಧನೆ ಹಾಗೂ ತಾಂತ್ರಿಕ ಪ್ರಗತಿಯ ಕುರಿತು ಮಾಹಿತಿ ಪಡೆಯಲಾಯಿತು.
ನಂತರ ಬೆಂಗಳೂರಿನ ಲೋಕಭವನದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಸಂವಾದ ನಡೆಸಲಾಯಿತು. ಈ ವೇಳೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ವೈಶಿಷ್ಟ್ಯಗಳು, ಪ್ರವಾಸೋದ್ಯಮ ಹಾಗೂ ರಾಜ್ಯ ಸರ್ಕಾರ ಮತ್ತು ಲೋಕಭವನದ ಆಡಳಿತ ವೈಖರಿ, ಸಾರ್ವಜನಿಕ ಆಡಳಿತದ ಕುರಿತು ತಿಳಿದುಕೊಳ್ಳಲಾಯಿತು.
ದೇಶದ ಪ್ರತಿಷ್ಟಿತ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‍ವರ್ಕ್ ಹಾಗೂ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್‍ಗೆ ಭೇಟಿ ನೀಡಲಾಯಿತು, ಭಾರತದ ಬಾಹ್ಯಾಕಾಶ ವಿಜ್ಞಾನವಾದ, ಗಗನಯಾನ, ಚಂದ್ರಯಾನ ಮತ್ತು ನಿಸಾರ್ ಸೇರಿದಂತೆ ಪ್ರಮುಖ ಯೋಜನೆಗಳು ಹಾಗೂ ಸ್ವದೇಶಿ ಬಾಹ್ಯಾಕಾಶ ತಂತ್ರಜ್ಞಾನಗಳ ಕುರಿತು ತಿಳಿದುಕೊಳ್ಳಲಾಯಿತು.
ಕಲಬುರಗಿ: ಕೃಷಿ ಮತ್ತು ಪ್ರಾದೇಶಿಕ ಆರ್ಥಿಕತೆ:
ದೇಶದ ತೊಗರಿ ಕಣಜವಾದ ಕಲಬುರಗಿಯ ತೊಗರಿ ಬೇಳೆ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ, ತೊಗರಿ ಉತ್ಪಾದನೆ, ಸಂಸ್ಕರಣಾ ಪ್ರಕ್ರಿಯೆ ಹಾಗೂ ಕೃಷಿ ಆಧಾರಿತ ಆರ್ಥಿಕತೆಯ ಕುರಿತು ಮಾಹಿತಿ ಪಡೆಯಲಾಯಿತು. ಜಿಐ ಮಾನ್ಯತೆ ಪಡೆದ ತೊಗರಿ ಬೇಳೆಯ ವೈಶಿಷ್ಟ್ಯ ಮತ್ತು ಪ್ರಾದೇಶಿಕ ಆರ್ಥಿಕತೆಯಲ್ಲಿ ಅದರ ಮಹತ್ವವನ್ನು ಅರಿಯಲಾಯಿತು. ಕೃಷಿ, ಸ್ಥಳೀಯ ಜೀವನೋಪಾಯ ಮತ್ತು ಆರ್ಥಿಕ ಅಭಿವೃದ್ಧಿಯ ನಡುವಿನ ಸಂಬಂಧವನ್ನು ಅರಿಯಲು ಈ ಭೇಟಿ ಮತ್ತಷ್ಟು ಸಹಕಾರಿಯಾಯಿತು.
ಸಿಯುಕೆನಲ್ಲಿ ಸಮಾರೋಪ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ:
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ) ಯಲ್ಲಿ ಆಯೋಜಿಸಲಾದ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಯುವಸಂಗಮ7ನೇ ಹಂತ ಮುಕ್ತಾಯಗೊಂಡಿತು. ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಹಾಗೂ ಕಾನೂನು ನಿಕಾಯ ಮತ್ತು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ. ಬಸವರಾಜ ಕುಬ್ಬಕಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಿಯುಕೆ ವಿದ್ಯಾರ್ಥಿಗಳು ಸಾಂಸ್ಕøತಿಕ ನೃತ್ಯಗಳನ್ನು ಹಾಗೂ ಮಧ್ಯಪ್ರದೇಶದ ನಿಯೋಗದ ಸದಸ್ಯರು ಸಾಂಪ್ರದಾಯಿಕ ಹಾಗೂ ಬುಡಕಟ್ಟು ನೃತ್ಯಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದರು. ಎರಡೂ ರಾಜ್ಯಗಳ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯ ಪರಿಚಯಕ್ಕೆ ಈ ವೇದಿಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶದ ನಿಯೋಗದ ಸದಸ್ಯರು ತಮ್ಮ ಕರ್ನಾಟಕ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.
ಯುವ ಸಂಗಮದ 7ನೇ ಹಂತದ ನೋಡಲ್ ಅಧಿಕಾರಿ ಡಾ. ಎಂ. ಶಿವ, ಕಾರ್ಯಕ್ರಮ ಸಂಯೋಜಕ ಡಾ. ಜಗದೀಶ್ ಬಿರಾದಾರ್ ನೇತೃತ್ವ ವಹಿಸಿದ್ದರು. ಸಾಂಸ್ಕೃತಿಕ ವಿನಿಮಯ, ಯುವಜನರ ಪರಸ್ಪರ ಸಂವಾದ ಮತ್ತು ರಾಷ್ಟ್ರೀಯ ಏಕೀಕರಣದ ಆಶಯಗಳನ್ನು ಬಲಪಡಿಸಿದ ಪ್ರವಾಸದ ಬಳಿಕ ನಿಯೋಗವು ಅಕ್ಟೋಬರ್ 3ರಂದು ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಿತು























