
ಕಲಬುರಗಿ,ಆ.25-ಕಲಬುರಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ‘ವಿಶ್ವ ಪ್ರವಾಸೋದ್ಯಮ ದಿನ’ದ ಅಂಗವಾಗಿ ಜಿಲ್ಲೆಯ ಐತಿಹಾಸಿಕ ಪರಂಪರೆಯನ್ನು ಸಾರುವ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ‘ಪರಂಪರೆ ನಡಿಗೆ”ಗೆ ಬೆಳಿಗ್ಗೆ 6.30 ರಿಂದ 10 ಗಂಟೆಯವರೆಗೆ ಕಲಬುರಗಿ ಕೋಟೆಯಿಂದ ಆರಂಭಗೊಂಡು ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು.
ಈ ಹೆಮ್ಮೆಯ ನಡಿಗೆಯಲ್ಲಿ ಕಲಬುರಗಿ ಕೇಂದ್ರ ವಿಶ್ವವಿದ್ಯಾಲಯ (ಅUಏ), ಶರಣಬಸವೇಶ್ವರ ವಿಶ್ವವಿದ್ಯಾಲಯ ಹಾಗೂ ಇತರೆ ಪ್ರಮುಖ ಶಿಕ್ಷಣ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು, ಪ್ರವಾಸೋದ್ಯಮ ಪಾಲುದಾರರು ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.























