
ಕಲಬುರಗಿ,ಸೆ.25-ನಗರದ ಆಳಂದ ರಸ್ತೆಯ ಡಿ.ಕೆ.ಪಾಟೀಲ ಕಲ್ಯಾಣ ಮಂಟಪದಲ್ಲಿ ಆಳಂದ ತಾಲ್ಲೂಕಿನ ಭೂಸನೂರದ ಸಹಕಾರಿ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ 45ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಜರುಗಿತು.
ಮಹಾಸಭೆಯ ಅಧ್ಯಕ್ಷರಾದ ಗುರುಲಿಂಗ ಜಂಗಮ ಎಸ್.ಮಾಲಿಪಾಟೀಲ (ಧಂಗಾಪೂರ) ಅವರ ಅನುಪಸ್ಥಿತಿಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ಸುಭಾಷ ಬಿ.ಮುರುಡ ಬೆಳಮಗಿ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಕಾರ್ಖಾನೆಯ ಕಾರ್ಯವ್ಯಾಪ್ತಿಯಾದ ಆಳಂದ, ಅಫಜಲಪೂರ, ಕಮಲಾಪೂರ ಮತ್ತು ಕಲಬುರಗಿ ತಾಲ್ಲೂಕಿನ ಸುಮಾರು 325 ಶೇರು ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಭಾಗಿಯಾಗಿದ್ದರು.
ಕಬ್ಬು ಬೆಳೆಗಾರ ರೈತರ ಅಭಿಲಾಶೆಯಂತೆ ಆಡಳಿತ ಮಂಡಳಿಯು ರೈತರ ಎಲ್ಲಾ ಸಮಸ್ಯೆಗಳನ್ನು ಅಂದರೆ ಕಬ್ಬು ಕಟಾವು, ಕಬ್ಬು ಸಾಗಾಣಿಕೆ, ಕಬ್ಬಿನ ದರ ನಿಗದಿ ಪಡಿಸುವ ಬಗ್ಗೆ, ಕಬ್ಬಿನ ಇಳುವರಿ, ಕಬ್ಬಿನ ತೂಕ, ನಿಗದಿತ ಅವಧಿಯೊಳಗೆ ಕಬ್ಬು ಸಾಗಿಸಿದ ರೈತರ ಖಾತೆಗೆ ರೈತರ ಬಿಲ್ಲು ಪಾವತಿಸುವುದರ ಬಗ್ಗೆ ರೈತರು ಕೇಳಿದ ಪ್ರಶ್ನೆಗಳಿಗೆ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು, ಸರ್ವ ಸದಸ್ಯರು ರೈತರಿಗೆ ಉತ್ತರಿಸಿದರು. ಸಭೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ, ಕಬ್ಬಿನ ಸಸಿಗೆ ನೀರು ಉಣಿಸುವುದರ ಮೂಲಕ ರೈತ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.
ವಾರ್ಷಿಕ ಮಹಾಸಭೆಯಲ್ಲಿ ರೈತರಾದ ವಿಶ್ವನಾಥ ಪವಾಡಶೆಟ್ಟಿ, ಬಸವರಾಜ ಮಲಶೆಟ್ಟಿ, ಚಂದ್ರಾಮಪ್ಪಾ ಮಾಟಿ, ಸಿದ್ರಾಮಪ್ಪಾ ಮುತ್ತಿ, ಸಿದ್ರಾಮಪ್ಪ ಪಾಟೀಲ ಗೋಳಾ, ದೇವಪ್ಪಾ ಭನಶೆಟ್ಟಿ, ಶರಣಬಸಪ್ಪಾ ಬೆಳಮಗಿ, ಪರಮೇಶ್ವರ ಗೋಳಾ, ಅಣ್ಣಾರಾವ ಯಳವಂತಗಿ, ಬಾಬುರಾವ ಗೊಬ್ಬೂರ, ಸತೀಷ ಕಡಗಂಚಿ, ಸಾತಲಿಂಗಪ್ಪಾ ಪಾಟೀಲ, ಎನ್ಎಸ್ಎಲ್ ಕಂಪನಿಯ ಅಧಿಕಾರಿ ಮಲ್ಲಪ್ಪಾ ಅಂಬಿ, ಖಂಡೆರಾಯ ಹೂಸುರೆ, ನಿರ್ದೇಶಕರಾದ ಧರ್ಮರಾಜ ಬಿ.ಸಾಹು, ಚನ್ನಬಸಪ್ಪಾ ಡಿ.ಮಾಲಿಪಾಟೀಲ, ಶಾಂತೇಶ್ವರ ಎಸ್.ಪಾಟೀಲ, ಗುರುಪ್ರಸಾದ ಎಸ್.ಪಾಟೀಲ, ರತ್ನಾಬಾಯಿ ಎಸ್.ಮಾಲಿಪಾಟೀಲ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿಂದ್ರ ವ್ಹಿ.ಮೇಲ್ಕರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿಬ್ಬಂದಿಗಳಾದ ಶಿವಶರಣಪ್ಪಾ ಕುಂಬಾರ, ಮಹಾಲಿಂಗಪ್ಪಾ ಜಮಾದಾರ, ಶಿವಾನಂದ ಚಿಚಕೋಟಿ, ಸಿದ್ರಾಮ ಚೌಲ್, ದೇವಿಂದ್ರ ಶಿರಶ್ಯಾಡ್ ಸಭೆಯಲ್ಲಿ ಭಾಗವಹಿಸಿದ್ದರು. ಶಿವಾನಂದ ಅಷ್ಟಗಿ ವಂದಿಸಿದರು.























