Home ಜಿಲ್ಲೆ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ

ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ


ಲಕ್ಷೆ÷್ಮÃಶ್ವರ,ಸೆ.೨೫: ಪುರಸಭೆ ವ್ಯಾಪ್ತಿಯ ಸೋಮೇಶ್ವರ ನಗರದಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿರುವ ಪ್ರಮುಖ ವಸತಿ ಪ್ರದೇಶವಾಗಿದ್ದು ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ವಸತಿ ಪ್ರದೇಶ ವ್ಯಾಪ್ತಿ ಹೆಚ್ಚಾಗುತ್ತಿದೆ. ಆದಾಗ್ಯೂ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಬೀದಿ ದೀಪ, ನಗರದ ಸ್ವಚ್ಛತೆ, ಉದ್ಯಾನವನ ಹಾಗೂ ಮುಂತಾದ ಮೂಲಭೂತ ನಾಗರಿಕ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಿಲ್ಲದಿರುವುದಿಲ್ಲ. ಎಂದು ನಿವಾಸಿಗಳಾದ ಜಯಲಕ್ಷಿö್ಮ ನೇಕಾರ ಹಾಗೂ ನಂದಾ ದರ್ಮಾಯತ್ ಮತ್ತಿತರರು ಒತ್ತಾಯಿಸಿದ್ದಾರೆ.


ಅವರು ಪುರಸಭೆ ಮುಖ್ಯಾದಿಕಾರಿ ಪರಶುರಾಮ ಗುಡದಾರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತ ಈ ಪ್ರದೇಶದಲ್ಲಿ ವೃದ್ಧಾಶ್ರಮವಿದ್ದು, ವೃದ್ಧರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ನಗರದ ರಸ್ತೆ, ನೀರು, ಬೀದಿದೀಪ, ಹಾಗೂ ಉದ್ಯಾನವನದಂತಹ ಮೂಲಭೂತ ಸೌಲಭ್ಯಗಳ ಮೇಲೆ ಅವಲಂಭಿತವಾಗಿದ್ದಾರೆ. ವಿಶೇಷವಾಗಿ ವೃದ್ಧಾಶ್ರಮದ ವಯೋವೃದ್ಧರಿಗೆ ಈ ಎಲ್ಲ ಸೌಲಭ್ಯಗಳು ಅತೀ ಅವಶ್ಯವಾಗಿವೆ. ರಸ್ತೆ ಅಭಿವೃದ್ಧಿ ಮತ್ತು ದುರಸ್ತ ಒಳರಸ್ತೆಗಳು ಹಾಗೂ ಸಂಪರ್ಕ ರಸ್ತೆಗಳ ಸ್ಥಿತಿಗಳನ್ನು ಪರೀಶಿಲಿಸಿ ಹದೆಗೆಟ್ಟಿರುವ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಬೇಕು ಎಂದರು.


ಅಗತ್ಯವಿರುವ ಕಡೆಗಳಲ್ಲಿ ಡಾಂಬರೀಕರಣ ಸಿಸಿ ರಸ್ತೆ ನಿರ್ಮಾಣ ಮಾಡಬೇಕ ಮುಖ್ಯರಸ್ತೆ, ಒಳರಸ್ತೆಗಳು, ತಿರುವುಗಳು, ವೃದ್ಧಾಶ್ರಮದ ಸುತ್ತಮುತ್ತ ಮತ್ತು ಅಗತ್ಯವಿರುವ ಕಡೆಗಳಲ್ಲಿ ಸಮಪರ್ಕವಾದ ಬೆಳಕು ಕೊಡುವ ಮರ್ಕುರಿ ಅಥವಾ ಯಾವುದಾದರೂ ಪ್ರಕಾಶಮಾನವಾದ ಬೆಳಕು ಬರುವಂತಹ ಲೈಟ್‌ಗಳನ್ನು ಅಳವಡಿಸಬೇಕು ಮತ್ತು ಕೆಟ್ಟು ಹೋಗಿರುವ ಬೀದಿ ದೀಪಗಳನ್ನು ತಕ್ಷಣ ಬದಲಾಯಿಸಿ ರಾತ್ರಿ ಸಮಯದಲ್ಲಿ ಸಾರ್ವಜನಿಕರು, ವೃದ್ಧರು ಹಾಗೂ ಮಕ್ಕಳು ಸುರಕ್ಷಿತವಾಗಿ ಸಂಚರಿಸಲು ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಪೂಜಾ ಸಾಲಿಮಠ,ಶಾಂತಾ ಗುಳಗಣ್ಣವರ, ವಿನುತಾ ಅರಳಿ, ಸಾವಿತ್ರಿ ನೇಕಾರ, ಚೈತ್ರಾ ಅಂಗಡಿ, ಚಂದ್ರಕಲಾ ದೊಡ್ಡಮನಿ, ನೀಲಮ್ಮ ಹೊಂಬಳ,ನೀಲಮ್ಮ ಖಾನಪ್ಪನವರ,ಮಹಾದೇವಮ್ಮ ಗೌಳಿ ನೀಲಮ್ಮ ಹಾವೇರಿಮಠ, ಪದ್ಮಾ ಪುಷ್ಪ ಶಾರದಾ ಅನೇಕರು ಇದ್ದರು