Home ಜಿಲ್ಲೆ ಕಲಬುರಗಿ ಐಇಇಇ 14ಸಿರಲ್ಲಿ ಸಿಯುಕೆ ವಿದ್ಯಾರ್ಥಿಗಳ ಎಐ ಆವಿಷ್ಕಾರಗಳ ಪ್ರದರ್ಶನ

ಐಇಇಇ 14ಸಿರಲ್ಲಿ ಸಿಯುಕೆ ವಿದ್ಯಾರ್ಥಿಗಳ ಎಐ ಆವಿಷ್ಕಾರಗಳ ಪ್ರದರ್ಶನ

ಕಲಬುರಗಿ,ಸೆ.24: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಂಪ್ಯೂಟರ್ ವಿಜ್ಞಾನ, ಸಾಂಖ್ಯಿಕ ಶಾಸ್ತ್ರ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹೈದರಾಬಾದ್‍ನ ಗಚಿಬೌಲಿಯಲ್ಲಿರುವ ಇಂಜಿನಿಯರಿಂಗ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದಲ್ಲಿ ಸೆ. 22 ಮತ್ತು 23ರಂದು ನಡೆದ (ಐಇಇಇ ಇಇಎಸ್ ಕೈಗಾರಿಕಾ ನಾವಿನ್ಯತೆ ಸಮಾವೇಶ 14ಸಿ, 2026ದಲ್ಲಿ ಭಾಗವಹಿಸಿ ತಮ್ಮ ನವೀನ ತಾಂತ್ರಿಕ ಪರಿಹಾರಗಳನ್ನು ಪ್ರದರ್ಶಿಸಿದರು.
ಎರಡು ದಿನಗಳ ಈ ಸಮಾವೇಶದಲ್ಲಿ ಮುಖ್ಯ ಭಾಷಣಗಳು, ಉದ್ಯಮ ತಜ್ಞರೊಂದಿಗೆ ಸಂವಾದ, ತಾಂತ್ರಿಕ ಅಧಿವೇಶನಗಳು, ಪೆÇೀಸ್ಟರ್ ಪ್ರಸ್ತುತಿಗಳು ಹಾಗೂ ಎಂವಿಪಿ ಪ್ರದರ್ಶನಗಳು ನಡೆದವು. ಕೃತಕ ಬುದ್ಧಿಮತ್ತೆ, ಪವರ್ ಎಲೆಕ್ಟ್ರಾನಿಕ್ಸ್, ಹಸಿರು ಹೈಡ್ರೋಜನ್, ಎಲೆಕ್ಟ್ರಿಕ್ ಮೊಬಿಲಿಟಿ, ಕೈಗಾರಿಕಾ ಎಂಜಿನಿಯರಿಂಗ್ ಮತ್ತು ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಹಲವು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಚರ್ಚಿಸಲಾಯಿತು.
ಇನ್ನೋವಟೆಕ್ಸ್ ಶೋಕೇಸ್ ನ ಭಾಗವಾಗಿ ವಿಶ್ವವಿದ್ಯಾಲಯದ 12 ತಂಡಗಳು ಕೃಷಿ, ವಿಪತ್ತು ನಿರ್ವಹಣೆ, ಭೂವಿಜ್ಞಾನ, ರಿಮೋಟ್ ಸೆನ್ಸಿಂಗ್, ಆರೋಗ್ಯ ಮತ್ತು ಇಂಧನ ಕ್ಷೇತ್ರಗಳಲ್ಲಿನ ನೈಜ-ಜಗತ್ತಿನ ಸವಾಲುಗಳಿಗೆ ಪರಿಹಾರ ಒದಗಿಸುವ ನವೀನ ಯೋಜನೆಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿದವು.
ಈ ಭಾಗವಹಿಸುವಿಕೆಯ ಮೂಲಕ ಸಿಯುಕೆ ವಿದ್ಯಾರ್ಥಿಗಳಿಗೆ ಉದ್ಯಮ ವೃತ್ತಿಪರರೊಂದಿಗೆ ಸಂವಹನ ನಡೆಸಲು, ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಅರಿವು ಪಡೆಯಲು ಹಾಗೂ ಸಮಕಾಲೀನ ಸಾಮಾಜಿಕ ಮತ್ತು ಕೈಗಾರಿಕಾ ಸವಾಲುಗಳಿಗೆ ಪ್ರಾಯೋಗಿಕ ತಾಂತ್ರಿಕ ಪರಿಹಾರಗಳನ್ನು ಪ್ರದರ್ಶಿಸಲು ಅವಕಾಶ ದೊರೆಯಿತು.
ವಿಶ್ವವಿದ್ಯಾಲಯದ ಐಐಸಿನೋಡಲ್ ಅಧಿಕಾರಿ ಡಾ. ರೋಹಿತ್ ಕುಮಾರ್ ಬಿ. ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಸುಶ್ರುತ ರಾಜ್ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರು ಸೇರಿದಂತೆ ವಿದ್ಯಾರ್ಥಿಗಳು ಸಮಾವೇಶದ ಶೈಕ್ಷಣಿಕ ಹಾಗೂ ನಾವೀನ್ಯತಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.