Home ಜಿಲ್ಲೆ ಕಲಬುರಗಿ ಡಾ. ಪಿ.ಎಸ್. ಶಂಕರ್ ಅವರಿಗೆ ಜಿಎಸ್‍ಐ ಜೀವಮಾನ ಸಾಧನೆ ಪ್ರಶಸ್ತಿ

ಡಾ. ಪಿ.ಎಸ್. ಶಂಕರ್ ಅವರಿಗೆ ಜಿಎಸ್‍ಐ ಜೀವಮಾನ ಸಾಧನೆ ಪ್ರಶಸ್ತಿ

ಕಲಬುರಗಿ: ಹಿರಿಯ ಖ್ಯಾತ ವೈದ್ಯರು ಹಾಗೂ ವೈದ್ಯಕೀಯ ಶಿಕ್ಷಕರಾದ ಡಾ. ಪಿ.ಎಸ್. ಶಂಕರ್ ಅವರಿಗೆ ದೇಶದಲ್ಲಿ ವೃದ್ಧಾಪ್ಯ ವೈದ್ಯಕೀಯ (ಜೆರಿಯಾಟ್ರಿಕ್) ಕ್ಷೇತ್ರದ ಚಟುವಟಿಕೆಗಳ ಗುರುತಿಸುವಿಕೆ, ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.
ಸೆಪ್ಟೆಂಬರ್ 18ರಿಂದ ಕೋಲ್ಕತ್ತಾದಲ್ಲಿ ನಡೆದ ಜಿಎಸ್‍ಐನ ಮೂರು ದಿನಗಳ 39ನೇ ವಾರ್ಷಿಕ ಸಮ್ಮೇಳನದಲ್ಲಿ ಡಾ. ಶಂಕರ್ ಅವರು ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ಅವರ ಪರವಾಗಿ ಪ್ರದಾನ ಮಾಡಲಾಯಿತು. ದೇಶದಲ್ಲಿ ವೃದ್ಧಾಪ್ಯ ಆರೈಕೆಗೆ ಅತ್ಯುನ್ನತ ಆದ್ಯತೆ ನೀಡುವ ಅಗತ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ ಡಾ. ಶಂಕರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಜೆರಿಯಾಟ್ರಿಕ್ಸ್ ಮತ್ತು ಜೆರೊಂಟಾಲಜಿ ವಿಷಯದಲ್ಲಿ ಮೂರು ತಿಂಗಳ ಆನ್‍ಲೈನ್ ಪ್ರಮಾಣಪತ್ರ ಕೋರ್ಸ್ ಆರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಆರು ವರ್ಷಗಳಲ್ಲಿ ಈ ಕೋರ್ಸ್ ಆರು ಅವಧಿಗಳಲ್ಲಿ ನಡೆಸಲಾಗಿದೆ. ಜಿಎಸ್‍ಐ ಸಂಸ್ಥೆಯು ಈ ಹಿಂದೆಯೂ ಡಾ. ಶಂಕರ್ ಅವರ ಸೇವೆಯನ್ನು ಗುರುತಿಸಿದ್ದು, 2012ರಲ್ಲಿ ಬೆಳಗಾವಿಯಲ್ಲಿ ನಡೆದ ಸಂಸ್ಥೆಯ ಸಮಾವೇಶದಲ್ಲಿ ಇದೇ ರೀತಿಯ ಗೌರವವನ್ನು ಅವರಿಗೆ ನೀಡಿತ್ತು.