Home ಜಿಲ್ಲೆ ಎಸ್‌ಐಆರ್ ಜಾಗೃತಿ ಅಭಿಯಾನ

ಎಸ್‌ಐಆರ್ ಜಾಗೃತಿ ಅಭಿಯಾನ

ನವಲಗುಂದ,ಸೆ೨೦: ಜಿಲ್ಲಾ ಹಾಗೂ ತಾಲ್ಲೂಕು ‘ಸ್ವೀಪ್’ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಜಾಗೃತಿ ವಿಶೇಷ ಅಭಿಯಾನಕ್ಕೆ ಪುರಸಭೆ ಮುಂಭಾಗ ತಾ.ಪಂ.ಇಓ ರವೀಂದ್ರಗೌಡ ಪಾಟೀಲ ಹಾಗೂ ಮುಖ್ಯಾಧಿಕಾರಿ ಎಸ್ ಪಿ ಪೂಜಾರ ಚಾಲನೆ ನೀಡಿದರು.

ಈ ವೇಳೆ ರವೀಂದ್ರಗೌಡ ಪಾಟೀಲ ಮಾತನಾಡಿ ‘ಅರ್ಹ ನಾಗರಿಕರ ಹೆಸರನ್ನು ಸೇರಿಸಲು ಮತ್ತು ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಎಸ್‌ಐಆರ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸಂಬAಧಿಸಿದ ಮತಗಟ್ಟೆಗಳಿಗೆ ಭೇಟಿ ನೀಡಿ, ಹೆಸರನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳಿದ್ದರೆ ಮಾಡಿಸಿಕೊಳ್ಳಬಹುದು ಎಂದರು

ಮುಖ್ಯಾಧಿಕಾರಿ ಎಸ್ ಪಿ ಪೂಜಾರ ಮಾತನಾಡಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಿಂದ ಹೆಸರು ತೆಗೆದುಹಾಕಲು ಹಾಗೂ ತಿದ್ದುಪಡಿಗಳು ಮತ್ತು ವಿಳಾಸ ಬದಲಾವಣೆಗೆ ಮಾಡಿಸಬಹುದು’ ನಾಗರಿಕರು ಮತದಾರರ ಗುರುತಿನ ಚೀಟಿಗೆ ಸಂಬAಧಿಸಿದ ಆಕ್ಷೇಪಣೆ ಹಾಗೂ ತಿದ್ದುಪಡಿ ಮಾಡಿಸಿ ಎಂದು ಮಾಹಿತಿ ನೀಡಿದರು.

ನಂತರ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು.

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಭೋವಿ, ಶಿವಯೋಗಿ ಜಂಗನ್ನ
ವರ ಸಾವಿತ್ರಿ ಮುಶಪ್ಪನವರ, ಸುನೀಲ ಡಂಬಳ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು