Home ಜಿಲ್ಲೆ ಸಾಲ ಸೌಲಭ್ಯ-ಸದುಪಯೋಗಕ್ಕೆ ಕರೆ

ಸಾಲ ಸೌಲಭ್ಯ-ಸದುಪಯೋಗಕ್ಕೆ ಕರೆ


ಬಾದಾಮಿ,ಸೆ.೨೦: ತಾಲೂಕಿನ ಢಾಣಕಶಿರೂರ ಪಿಕೆಪಿಎಸ್ ಪ್ರಸಕ್ತ ಸಾಲಿನಲ್ಲಿ ೭.೩೦ ಲಕ್ಷ ರೂ ನಿವ್ವಳ ಲಾಭ ಗಳಿಸಿ ರೈತ ಪರ ಚಟುವಟಿಕೆಗಳಿಗೆ ಸ್ಪಂದಿಸಿ ಉತ್ತಮ ಹಣಕಾಸಿನ ವಹಿವಾಟು ನಡೆಸುತ್ತ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಅಧ್ಯಕ್ಷ ವೀರಣ್ಣ ಹೊರಕೇರಿ ತಿಳಿಸಿದರು.


ಅವರು ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬರಗಾಲ ಘೋಷಣೆ ಹಿನ್ನಲೆಯಲ್ಲಿ ಬಿಡಿಸಿಸಿ ಬ್ಯಾಂಕ ನಿರ್ದೇಶನದಂತೆ ಶೇ.೩೫ ರಿಂದ ಶೇ೧೦ ರವರೆಗೆ ಮೂರು ವಿಧದಲ್ಲಿ ಹೆಚ್ಚುವರಿ ಸಾಲ ಸೌಲಭ್ಯವನ್ನು ಬರಗಾಲ ನಿಮಿತ್ಯ ನೀಡಲಾಗುತ್ತಿದೆ ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.


ಮುಕಾನಿ ಬಸವರಾಜ ಹೊರಕೇರಿ ಅಢಾವೆ ಪತ್ರಿಕೆ ವಾಚನ ಮಾಡಿ ಮಾತನಾಡಿ ೨೦೧೮ ರಲ್ಲಿ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಇನ್ನು ೩೫ ಜನರು ಹೊರಗೆ ಉಳಿದಿದ್ದು, ಅವರು ತಮ್ಮ ಸಾಲವನ್ನು ಮರು ಪಾವತಿಸಿ ಹೊಸ ಸಾಲವನ್ನಾಗಿ ಪರಿವರ್ತಿಸಿಕೊಳ್ಳಬೇಕೆಂದು ಹೇಳಿದರು. ನಿರ್ದೇಶಕ ಹನಮಪ್ಪ ಬೇನಾಳ ವಾರ್ಷಿಕ ವರದಿ ಓದಿದರು.


ವೇದಿಕೆಯಲ್ಲಿ ಉಪಾಧ್ಯಕ್ಷ ಹನಮಂತಪ್ಪ ಬಸವಲಿಂಗಪ್ಪನವರ, ನಿರ್ದೇಶಕರಾದ ರಂಗನಗೌಡ ಹೊರಕೇರಿ, ಫಕೀರಗೌಡ ಪಾಟೀಲ, ಶರಣಪ್ಪ ಬಾಲನಗೌಡರ, ಮಹೇಶ ಅಮೀನಪ್ಪನವರ, ಯಲ್ಲಪ್ಪ ಜೋಗಿ, ಹನಮಪ್ಪ ಮಾದರ, ರೇಣುಕಾ ಮಲ್ಲಾಪೂರ, ಕಲ್ಲವ್ವ ಹಡಪದ, ಲೋಹಿತ ಚಿಮ್ಮಲ, ಹಿರಿಯರಾದ ಶಿವಪ್ಪ ಹೊರಕೇರಿ, ಬಸವರಾಜ ಗೊನ್ನಾಗರ, ಭೀಮನಗೌಡ ಪಾಟೀಲ, ಪ್ರಲ್ಹಾದ ಇನಾಮದಾರ, ಶಿವನಪ್ಪ ಅಮೀನಪ್ಪನವರ, ಹನಮಪ್ಪ ಮಾಗಿ ಇತರರು ಇದ್ದರು.


ಎಸ್.ಎಸ್.ಎಲ್.ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಪಾಪು ಪ್ರಶಸ್ತಿ ಪುರಸ್ಕೃತ ಅಡಿವೇಂದ್ರ ಇನಾಮದಾ, ಬ್ಯಾಂಕ ಸುಪ್ರವೈಜರ್ ಶೈಲಾ ಬಣಕಾರ ಅವರನ್ನು ಪುರಸ್ಕರಿಸಲಾಯಿತು. ಜಾಲಿಹಾಳ ಪಿಕೆಪಿಎಸ್ ಮುಕಾನಿ ಮೌನೇಶ ಬಡಿಗೇರ ನಿರೂಪಿಸಿ ವಂದಿಸಿದರು. ಸಂಘದ ಸಿಬ್ಬಂದಿ, ರೈತರು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.