Home ಜಿಲ್ಲೆ ಕಲಬುರಗಿ ಪ್ರತ್ಯೇಕ ಘಟನೆ : ನಗರದಲ್ಲಿ ಇಬ್ಬರ ಕೊಲೆ

ಪ್ರತ್ಯೇಕ ಘಟನೆ : ನಗರದಲ್ಲಿ ಇಬ್ಬರ ಕೊಲೆ

ಕಲಬುರಗಿ,ಸೆ.19: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶುಕ್ರವಾರ ಎರಡು ಕೊಲೆ ಪ್ರಕರಣಗಳು ನಡೆದಿವೆ.
ತಮ್ಮನನ್ನೇ ಕೊಂದ ಅಣ್ಣ:
ತಾಲೂಕಿನ ಭೂಪಾಲ್ ತೆಗನೂರ ಗ್ರಾಮದಲ್ಲಿ ಅಣ್ಣನೇ ತಮ್ಮನನ್ನು ಭೀಕರವಾಗಿ ಕೊಂದಿದ್ದಾನೆ.
ಧನರಾಜ್ ಅಲಿಯಾಸ್ ಚಿನ್ಯಾ ಮೈಲಾರಿ ಶೆಳ್ಳಗಿ ( 34) ಕೊಲೆಯಾದ ವ್ಯಕ್ತಿ.ಆತನ ವಿರುದ್ದ ನಗರದ ಎಂಬಿ ನಗರ ಠಾಣೆಯಲ್ಲಿ ಹಳೆಯ ಪ್ರಕರಣಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಧನರಾಜ ಜೊತೆಗೆ ಹೊಲದಲ್ಲಿ ಜಗಳವಾಡುವ ವೇಳೆ ಅವರ ಅಣ್ಣ ಶಿವರಾಜ ಮೈಲಾರಿ ಶೆಳ್ಳಗಿ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ.ಗಂಭೀರವಾಗಿ ಗಾಯಗೊಂಡ ಧನರಾಜನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾನೆ.ಈ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕು ಇರಿದು ಕೊಲೆ:
ಕಲಬುರಗಿ ರಾಮನಗರ ಬಡಾವಣೆಯಲ್ಲಿ ಚಾಕುವಿನಿಂದ ಇರಿದು ವಿಜಯಕುಮಾರ ಬಾಬುರಾವ್ ( 26) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ.
ಬಾರ್‍ವೊಂದರ ಬಳಿ ಸಂಜೆ 5 ಗಂಟೆ ಸುಮಾರಿಗೆ ಈ ಹತ್ಯೆ ನಡೆದಿದೆ.ದುಷ್ಕರ್ಮಿಗಳು ವಿಜಯಕುಮಾರಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ವಿಜಯಕುಮಾರ ಆಸ್ಪತ್ರೆಗೆ ಸಾಗಿಸುವಾಗ ಮೃತನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ