
ಮಂಗಳೂರು : ಸಂಸ್ಕೃತ ಜಗತ್ತಿನಾದ್ಯಂತ ಆಕರ್ಷಿಸಲ್ಪಟ್ಟ ಭಾಷೆ. ಇಂದಿನ ಆಧುನಿಕತೆಯ ಆಕರ್ಷಣೆಯಿಂದ ವಿದ್ಯಾರ್ಥಿಗಳ ಮನಸ್ಸನ್ನು ಸಂಸ್ಕೃತದೆಡೆಗೆ ಸೆಳೆಯಬೇಕಾಗಿದೆ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಸಂಸ್ಕೃತದಲ್ಲಿ ಪರಿಹಾರವಿದೆ. ಸಂಸ್ಕೃತ ಸಾಹಿತ್ಯದಲ್ಲಿ ಅಡಗಿರುವ ಜೀವಸತ್ವದ ಸತ್ಯ ದರ್ಶನದಿಂದ ಮನುಷ್ಯ ವಿಶ್ವ ಮಾನವನಾಗಬಲ್ಲ. ವಿಜ್ಞಾನ ಎಷ್ಟೆ ಬೆಳೆದರೂ ಸರೋವರದ ಕಮಲ ಪುಷ್ಪ ಅರಳಬೇಕಾದರೆ ಸೂರ್ಯ ಕಿರಣ ಸ್ಪರ್ಶವಾಗಲೇಬೇಕು ಹಾಗಾಗಿ ಜಗತ್ತಿನ ಚ್ಯೆತನ್ಯ ಶಕ್ತಿ ಬಗ್ಗೆ ಸ್ಪಷ್ಟ ಅರಿವು ಮೂಡಿಸಿದ ಪ್ರಾಚೀನ ಶಾಸ್ತ್ರ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿದೆ ಹಾಗಾಗಿ ಸತ್ಯದ ಅರಿವು ಮೂಡಿಸುವುದೇ ಸಂಸ್ಕೃತ ಸಾಹಿತ್ಯದ ಪರಮ ಲಕ್ಷ್ಯ ಹಾಗಾಗಿ ಇಂದಿನ ವಿಜ್ಞಾನ ವಿದ್ಯಾರ್ಥಿಗಳು ಸಂಸ್ಕೃತಾಸಕ್ತರಾದರೆ ಜಗತ್ತು ಸುಸಂಸ್ಕೃತವಾಗುತ್ತದೆ ಎಂಬುದಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಸಂಸ್ಕೃತ ಸ್ನಾತಕೋತ್ತರ ವಿಭಾಗದ ಪ್ರಾದ್ಯಾಪಕರಾದ ಡಾ| ಪದ್ಮನಾಭ ಮರಾಠೆ ಅಭಿಪ್ರಾಯಪಟ್ಟರು. ಇವರು ಮಂಗಳೂರಿನ ಶಾರದಾ ಪದವಿ ಪೂರ್ವ ಮಹಾವಿದ್ಯಾಲಯದ ಸಂಸ್ಕೃತ ಸಂಘದ ಆಶ್ರಯದಲ್ಲಿ ನಡೆದ ಸಂಸ್ಕೃತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಂಸ್ಕೃತ ಭಾಷೆಯ ಮಹತ್ವದ ಬಗ್ಗೆ ಮಾತನಾಡಿದರು.
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎಂ. ಬಿ. ಪುರಾಣಿಕರವರು ಮಾತನಾಡಿ, ಸಂಸ್ಕೃತ ಚೆನ್ನಾಗಿ ಪರಿಷ್ಕರಿಸಲ್ಪಟ್ಟ ಭಾಷೆ ಈ ಭಾಷೆಯಲ್ಲಿರುವ ಸತ್ವವನ್ನು ವಿದ್ಯಾರ್ಥಿಗಳು ತಿಳಿದು ಸಂಸ್ಕೃತದಲ್ಲಿರುವ ಮೌಲ್ಯವನ್ನು ಜೀವನ ಪರ್ಯಂತ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಶ್ರೀ ಸಮೀರ್ ಪುರಾಣಿಕ್ ಶುಭ ಹಾರೈಸಿದರು. ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ನಾಯ್ಕ್ ಉಪಪ್ರಾಚಾರ್ಯರಾದ ಶ್ರೀಮತಿ ಅರುಣಾ ಕುಮಾರಿ ಉಪಸ್ಥಿತರಿದ್ದರು. ಶಾರದಾ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀ ರಮೇಶ ಆಚಾರ್ಯ ನಾರಳ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ಸಂಸ್ಕೃತ ವಿದ್ಯಾರ್ಥಿಗಳು ವೇದಮಂತ್ರಗಳನ್ನು ಪಠಿಸಿದರು. ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿನಿ ಕು| ದಿಶಾಲಕ್ಷ್ಮಿ ಗತಿಸಿದರು. ಕು| ಶ್ರೀಯಾ ಮಳಿಗೆ ಧನ್ಯವಾದವಿತ್ತರು. ಕು| ಚೈತ್ರಿಕಾ ನಿರೂಪಿಸಿದರು.































