Home ಜಿಲ್ಲೆ ಕಲಬುರಗಿ ಸಾಫ್ಟವೇರ್ ಇಂಜಿನಿಯರ್‍ಗೆ 1.84 ಲಕ್ಷ ಸೈಬರ್ ವಂಚನೆ

ಸಾಫ್ಟವೇರ್ ಇಂಜಿನಿಯರ್‍ಗೆ 1.84 ಲಕ್ಷ ಸೈಬರ್ ವಂಚನೆ

ಕಲಬುರಗಿ,ಸೆ.15-ಆನ್ಲೈನ್ ಮೂಲಕ ಹಣ ಹೂಡಿಕೆ ಮಾಡಿ ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿ ಸಾಫ್ಟವೇರ್ ಇಂಜಿನಿಯರ್ ಒಬ್ಬರಿಗೆ 1,84,711 ರೂಪಾಯಿ ಸೈಬರ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೈದ್ರಾಬಾದನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ನಗರದ ರಿಂಗ್ ರಸ್ತೆಯ ವೈಷ್ಣವಿ ದೇವಸ್ಥಾನ ಹತ್ತಿರದ ಸ್ವಾರ್ಗೆಟ್ ನಗರ ನಿವಾಸಿ ಮಹಾದೇವ ತೇಗಾಂವ ಅವರು ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.

30 ಸಾವಿರ ರೂ.ವಂಚನೆ
ಕಡಿಮೆ ಬೆಲೆಯಲ್ಲಿ ಶಾಲಾ ಸಮವಸ್ತ್ರ ಕೊಡುವುದಾಗಿ ಹೇಳಿ ಖಾಸಗಿ ಶಾಲೆ ಮಾಲೀಕರೊಬ್ಬರಿಗೆ 30 ಸಾವಿರ ರೂ.ಸೈ¨ರ್ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಯಾದುಲ್ಲಾ ಕಾಲೋನಿಯಲ್ಲಿರುವ ಸ್ಟಡಿ ಬ್ರೀಜ್ ಇಂಟರನ್ಯಾಷನಲ್ ಶಾಲೆಯ ಮಾಲೀಕ ಮಹ್ಮದ್ ಸರ್ಫರಾಜ್ ಖಾನ್ ಅವರು ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದ ಅಪರಿಚಿತ ಖಾತೆಯಲ್ಲಿ ಎಲ್ಲ ರೀತಿಯ ಶಾಲಾ ಸಮವಸ್ತ್ರ ಮತ್ತು ಕ್ರೀಡಾ ಸಾಮಗ್ರಿ ಕಡಿಮೆ ಬೆಲೆಯಲ್ಲಿ ಮತ್ತು ಉತ್ತಮ ಗುಣಮಟ್ಟದನ್ನು ಸಿಗುತ್ತದೆ ಎಂಬ ಜಾಹೀರಾತು ನೋಡಿ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿರುವ ವಾಟ್ಸಪ್ ನಂಬರ್‍ಗೆ ಕರೆ ಮಾಡಿ ಮಾತನಾಡಲಾಗಿದೆ. ಉತ್ತರ ಪ್ರದೇಶ ಮೂಲದ ಕುನವರ್ ಪಾಲ್ ಸಿಂಗ್ ಎಂಬಾತ ಕರೆ ಸ್ವೀಕರಿಸಿ ಮಾತನಾಡಿ 100 ಜೊತೆ ಸಮವಸ್ತ್ರಕ್ಕೆ 68,500 ಕೋಟೇಶನ್ ಕಳುಹಿಸಿ 30 ಸಾವಿರ ರೂ. ಮುಂಗಡ ಹಣ ಕಳುಹಿಸಿದರೆ 15 ದಿನಗಳಲ್ಲಿ ಸಮವಸ್ತ್ರ ಕಳುಹಿಸುವುದಾಗಿ ತಿಳಿಸಿ ಸ್ಕ್ಯಾನರ್ ಕಳುಹಿಸಿದ್ದಾನೆ. ಆತನ ಮಾತನ್ನು ನಂಬಿ ಮಹ್ಮದ್ ಸರ್ಫರಾಜ್ ಖಾನ್ ಅವರು ತಮ್ಮ ಬ್ಯಾಂಕ್ ಖಾತೆ ಮೂಲಕ 30 ಸಾವಿರ ರೂ.ಗಳನ್ನು ಗೂಗಲ್ ಪೇ ಮೂಲಕ ವಂಚಕನ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಹಣ ಜಮಾ ಆದ ನಂತರ ಕುನವರ್ ಪಾಲ್ ಸಿಂಗ್ ಸಮವಸ್ತ್ರ ಕಳುಹಿಸದೆ ವಂಚನೆ ಮಾಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.