Home ಜಿಲ್ಲೆ ಕಲಬುರಗಿ ಸೆ.17 ರಂದು ಸಿಎಂಗೆ ಮುತ್ತಿಗೆ

ಸೆ.17 ರಂದು ಸಿಎಂಗೆ ಮುತ್ತಿಗೆ

ಕಲಬುರಗಿ,ಸೆ.15-ಯೂರಿಯಾ ರಸ ಗೊಬ್ಬರ ಕಳ್ಳ ಸಾಗಾಟದ ಆರೋಪಿಗಳನ್ನ ಬಂಧಿಸದೆ ಇರೋದನ್ನು ಖಂಡಿಸಿ ಶ್ರೀರಾಮ ಸೇನೆ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಸೆ.17 ರಂದು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಶ್ರೀರಾಮ ಸೇನೆ ಹಾಗೂ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ತಿಳಿಸಿದ್ದಾರೆ.
ನಗರದ ಇಂಡಸ್ಟ್ರಿಯಲ್ ಏರಿಯಾದ ದಾಲ್ ಗೋಡೌನ್ ಒಂದರಲ್ಲಿ ಸಬ್ಸಿಡಿ ದರದಲ್ಲಿ ಸಿಗಬೇಕಾಗಿರುವ ಯೂರಿಯಾ ರಸ ಗೊಬ್ಬರ ಸುಮಾರು 3000 ಸಾವಿರ ಚೀಲಗಳನ್ನ ಸ್ಟಾಕ್ ಮಾಡಿ ಬೇರೆ ಚಿ¯ಗಳಲ್ಲಿ ತುಂಬಿಸಿ ಹೊರ ರಾಜ್ಯಗಳಿಗೆ ದುಬಾರಿ ಹಣಕ್ಕೆ ರವಾನೆ ಮಾಡುತಿದ್ದ ಜಾ¯ವನ್ನು ಶ್ರೀ ರಾಮ್ ಸೇನೆ ಕಾರ್ಯಕರ್ತರು ಪತ್ತೆ ಹಚ್ಚಿದ್ದು, ನಂತರ ಪೆÇಲೀಸ್ ಇಲಾಖೆ ಹಾಗೂ ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ಗೋಡನ್ ಸಿಜ್ ಮಾಡಲಾಗಿತ್ತು. ಈ ಬಗ್ಗೆ ಸಬ್ ಅರ್ಬನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಗಾಗಲೇ ಪೆÇಲೀಸ್ ಇಲಾಖೆ, ಕೃಷಿ ಆಯುಕ್ತರು ಬೆಂಗಳೂರು, ಕೃಷಿ ಸಚಿವರು, ಲೋಕಾಯುಕ್ತ ಅಧಿಕಾರಿಗಳಿಗೆ, ಜಿಲ್ಲಾ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಈ ಪ್ರಕರಣ ಸಿಬಿಐಗೆ ಒಹಿಸಬೇಕೆಂದು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನ ಆಗಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದ್ದು, ಈ ಪ್ರಕರಣದಲ್ಲಿ ಭಾಗಿ ಆಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ 17 ನೇ ತಾರೀಕು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶ್ರೀ ರಾಮ್ ಸೇನೆ ಹಾಗೂ ರೈತ ಪರ ಸಂಘಟನೆಗಳ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಅವರು ತಿಳಿಸಿದ್ದಾರೆ.