Home ಜಿಲ್ಲೆ ಕಲಬುರಗಿ 17 ರಂದು ಮುಖ್ಯಮಂತ್ರಿಗೆ ಮುತ್ತಿಗೆ

17 ರಂದು ಮುಖ್ಯಮಂತ್ರಿಗೆ ಮುತ್ತಿಗೆ

ಕಲಬುರಗಿ,ಸೆ.15: ಕಳೆದ 9 ವರ್ಷದಿಂದ ಸಣ್ಣ ಸೇತುವೆ ನಿರ್ಮಿಸಲಾಗದ ಸರ್ಕಾರದ ಕಡೆಗಡಣೆ ಖಂಡಿಸುತ್ತ ಸೆ.17 ರಂದು ನರಿಬೋಳ ಚಾಮನೂರ ಹಾಗೂ ಸುತ್ತಮುತ್ತಲ ಗ್ರಾಮಗಳ ಜನ ಮುಖ್ಯಮಂತ್ರಿಗಳ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಂ ಎಸ್ ಪಾಟೀಲ ನರಿಬೋಳ, ಶರಣಗೌಡ ಪೆÇಲೀಸ್ ಪಾಟೀಲ ಚಾಮನೂರು ತಿಳಿಸಿದ್ದಾರೆ.
ನರಿಬೋಳ ಚಾಮನೂರಿನ ಕೊಂಡಿಯಾದ ಭೀಮಾ ನದಿಯ ಸೇತುವೆಯು 9 ವರ್ಷದಿಂದ ಕುಂಟುತ್ತಾ ಸಾಗಿದೆ ಶೇಕಡಾ 70 ರಷ್ಟು ರೆಡಿಯಾಗಿದ್ದ ಸೇತುವೆಯು ಪ್ರವಾಹದ ಸಂದರ್ಭದಲ್ಲಿ ಕೊಚ್ಚಿಕೊಂಡು ಹೋಗಿರುವುದು ಜನಪ್ರತಿನಿಧಿಗಳ ಗಮನಕ್ಕೆ ಯಾಕೆ ಬರುತ್ತಿಲ್ಲ.? ಹೋರಾಟ ಮಾಡಿದಾಗಲೊಮ್ಮೆ ಭರವಸೆ ಕೊಡುವುದಾಗಿದೆ. ಹೊರತಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಒಂದು ಸೇತುವೆಯು ನಿರ್ಮಿಸಲಾಗದ ಸರ್ಕಾರಗಳಿಗೆ ಉತ್ಸವ ಮಾಡಿ ಸನ್ಮಾನ ಮಾಡಿಸಿಕೊಂಡು ಪ್ರಚಾರ ಪಡೆಯುವುದೆ ಆಗಿದೆ ಎಂದು ಅವರು ತಿಳಿಸಿದ್ದಾರೆ