
ಕಮಲನಗರ,ಸೆ 15: ಸೋಮವಾರ ಸಾಯಂಕಾಲ ಆಕಾಶದಲ್ಲಿ ಚಂದ್ರನ ಹತ್ತಿರ ಕಂಡುಬರುವ ಶುಕ್ರ ಗ್ರಹ ಬೆಳಕು ಹೊಸ ಆರಂಭದ ಸಂಕೇತವಾಗಿದ್ದು ಸಾಂಸ್ಕøತಿಕವಾಗಿ ಬಾಲಚಂದ್ರನನ್ನು ಹೊಸ ತಿಂಗಳ ಆರಂಭ, ಬೆಳವಣಿಗೆ ಮತ್ತು ಹೊಸ ಬದಲಾವಣೆಗಳ ಸಂಕೇತವಾಗಿ ಕಂಡು ಬಂದಿತ್ತು.
ಆಕಾಶದಲ್ಲಿ ಚಂದ್ರನ ಅತ್ಯಂತ ಹತ್ತಿರದಲ್ಲಿ ಪ್ರಕಾಶಮಾನವಾದ ಶುಕ್ರ ಗ್ರಹ ಕಾಣಿಸುವ ಅಪರೂಪದ ವಿದ್ಯಮಾನವನ್ನು ಖಗೋಳಶಾಸ್ತ್ರದಲ್ಲಿ “ಚಂದ್ರ ಮತ್ತು ಶುಕ್ರ ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ.
ಚಂದ್ರನನ್ನು ಹೊರತುಪಡಿಸಿದರೆ ರಾತ್ರಿ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣಿಸುವ ಆಕಾಶಕಾಯವೆಂದರೆ ಶುಕ್ರ ಗ್ರಹ. ಇದನ್ನು ಸಾಮಾನ್ಯ ಭಾಷೆಯಲ್ಲಿ “ಬೆಳ್ಳಿ ನಕ್ಷತ್ರ” ಅಥವಾ ‘ಮುಂಜಾನೆಯ ನಕ್ಷತ್ರ,ಸಂಜೆಯ ನಕ್ಷತ್ರ” ಎಂದೂ ಕರೆಯುತ್ತಾರೆ.
ಈ ರೀತಿಯ ಅಪರೂಪದ ದೃಶ್ಯವು 2023 ರ ಮಾರ್ಚ್ 24 ರಂದು ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಕಂಡುಬಂದಿತ್ತು ಎಂದು ಹೇಳಲಾಗುತ್ತದೆ. ಆ ದಿನ ಸಂಜೆ ಚಂದ್ರನ ಅತ್ಯಂತ ಹತ್ತಿರದಲ್ಲಿ ಶುಕ್ರ ಗ್ರಹವು ಹೊಳೆಯುತ್ತಾ ಸಾರ್ವಜನಿಕರಿಗೆ ಮತ್ತು ಖಗೋಳ ಆಸಕ್ತರಿಗೆ ಒಂದು ಅದ್ಭುತ ದೃಶ್ಯ.
ನಿಜವಾಗಿ ಇವೆರಡೂ ಆಕಾಶದಲ್ಲಿ ಕೋಟ್ಯಂತರ ಕಿಲೋಮೀಟರ್ ದೂರದಲ್ಲಿದ್ದರೂ, ಭೂಮಿಯಿಂದ ನೋಡುವಾಗ ಒಂದೇ ಸರಳರೇಖೆಯಲ್ಲಿ ಬರುವುದರಿಂದ ನಮ್ಮ ಕಣ್ಣಿಗೆ ಇಷ್ಟು ಹತ್ತಿರವಾಗಿ ಕಾಣಿಸುತ್ತವೆ.





























