
ಕಲಬುರಗಿ,ಸೆ.15: ನಗರದ ಸ್ಪಾರ್ಕಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಲಾಗಿದ್ದ “ಸ್ಪಾರ್ಕಲ್ಸ್ ಪ್ರೀಮಿಯರ್ ಲೀಗ್-ಸೀಸನ್ 1” ಫುಟ್ಬಾಲ್ ಪಂದ್ಯಾವಳಿಯ ಗ್ರಾಂಡ್ ಕ್ಲೋಸಿಂಗ್ ಸಮಾರಂಭವು ಸ್ಪಾರ್ಕಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಸಂಭ್ರಮದಿಂದ ನಡೆಯಿತು.
ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಹುಸೇನ್ ಪಬ್ಲಿಕ್ ಸ್ಕೂಲ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಸ್ಪಾರ್ಕಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡರೆ,ಚಿಂಚೋಳಿಯ ವೀರೇಂದ್ರ ಪಾಟೀಲ್ ಸ್ಕೂಲ್ ತಂಡವು ಮೂರನೇ ಸ್ಥಾನ ಗಳಿಸಿತು.
ಪಂದ್ಯಾವಳಿಯಲ್ಲಿ ವಿವಿಧ ಶಾಲೆಗಳ ಯುವ ಫುಟ್ಬಾಲ್ ಆಟಗಾರರು ತಮ್ಮ ಕ್ರೀಡಾ ಪ್ರತಿಭೆ, ಶಿಸ್ತು, ತಂಡದ ಮನೋಭಾವ ಹಾಗೂ ಗೆಲುವಿನ ಉತ್ಸಾಹವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು.
ಸಮಾರೋಪ ಸಮಾರಂಭದಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು ಮುಖ್ಯ ಅತಿಥಿಯಾಗಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಅಜಲ್ ಅಹ್ಮದ್ ಗೋಲಾ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಅಪ್ಸರಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಎಂ. ಅಬ್ದುಲ್ ಮುಜೀಬ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಲಬುರಗಿ ನಗರದ ವಿವಿಧ ಸಿಬಿಎಸ್ಸಿ ಶಾಲೆಗಳ ಪ್ರಾಂಶುಪಾಲರುಗಳೊಂದಿಗೆ ಸ್ಪಾರ್ಕಲ್ಡ್ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲ ಸಂತೋಷ್ ಕುಮಾರ್ ಜೇಟ್ಲಿ ಅವರು ಕೂಡ ಉಪಸ್ಥಿತರಿದ್ದು, ಯುವ ಕ್ರೀಡಾಪಟುಗಳನ್ನು ಪೆÇ್ರೀತ್ಸಾಹಿಸಿದರು. ಶಾಲೆಯ ಆಡಳಿತಾಧಿಕಾರಿ ಡಾ.ದಿಲ್ಮಾಜ್ ಮುಜೀಬ್ ಹಾಗೂ ನಿರ್ದೇಶಕ ಅಮಾನ್ ಮುಜೀಬ್ ಸೇರಿದಂತೆ ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗಣ್ಯರು ಉಪಸ್ಥಿತರಿದ್ದರು.ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿ, ಉತ್ತಮ ಪದರ್ಶನ ನೀಡಿದ ಆಟಗಾರರನ್ನು ಅಭಿನಂದಿಸಲಾಯಿತು.





























