
ಕಲಬುರಗಿ: ಪಂಪಸೆಟ್ ಹೊಂದಿದ ರೈತರಿಗೆ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಹಾಗೂ ಸುಟ್ಟ ಟಿಸಿಗಳ ಆಯಿಲ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಶರಣಬಸಪ್ಪ ಮಮಶೆಟ್ಟಿ, ಸಿದ್ದಪ್ಪ ಕಲಶೆಟ್ಟಿ, ದೇವು ಬಿರಾದಾರ,ಚಂದಪ್ಪ ಪೂಜಾರಿ,ಸಾಯಬಣ್ಣ ಕೊರಬಾ,ನಾಗಯ್ಯಸ್ವಾಮಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು.





























