
ಲಕ್ಷೆ÷್ಮÃಶ್ವರ, ಸೆ೧೩: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಪ್ರತಿದಿನ ಶ್ರೀ ನೀಲಕಂಠೇಶ್ವರ ಸ್ವಾಮಿಗೆ ರುದ್ರಾಭಿಷೇಕ ಪೂಜೆ ಪುನಸ್ಕಾರಗಳು ಜರುಗಿ ಸಂಪನ್ನಗೊAಡವು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹದೇವಪ್ಪ ಬೆಳವಗಿ ಅವರು ಸುಖ ಸಮೃದ್ಧಿ ಬದುಕಿಗೆ ಸಂಸ್ಕಾರ ಮುಖ್ಯ. ಬದುಕಿನಲ್ಲಿ ಹೆಜ್ಜೆ ಗುರುತು ಮೂಡಿಸುವುದು ನಡಿಗೆಯಿಂದಲ್ಲ. ನಡತೆಯಿಂದ ಮಾತ್ರ ಸಾಧ್ಯ. ಹೆತ್ತ ಮಡಿಲು ಹೊತ್ತ ಹೆಗಲು ಜ್ಞಾನವಿತ್ತ ಗುರುವನ್ನು ಎಂದೆAದೂ ಮರೆಯಬಾರದೆಂದು ಸಮಸ್ಯೆಗಳನ್ನು ಪರಿಹರಿಸಲು ನಗು ಮತ್ತು ಸಮಸ್ಯೆಗಳನ್ನು ತಪ್ಪಿಸಲು ಮೌನ ಅವಶ್ಯಕ. ಸಂಸ್ಕಾರ ಪಡೆದ ಕಲ್ಲು ಮೂರ್ತಿಯಾಗುತ್ತದೆ. ಸಂಸ್ಕಾರ ಪಡೆದ ನೀರು ತೀರ್ಥವಾಗುತ್ತದೆ. ಸಂಸ್ಕಾರದಿAದ ಬದುಕು ಉಜ್ವಲಗೊಳ್ಳುತ್ತದೆ ಹೊಗಳುವ ಜನ ಸಿಗುತ್ತಾರೆ. ಆದರೆ ಎಡವಿದಾಗ ತಪುö್ಪ ತಿದ್ದುವವರು ಬೆರಳೆಣಿಕೆ ಜನ ಮಾತ್ರ ಎಂಬುದನ್ನು ಯಾರೂ ಮರೆಯಬಾರದು ಎಂದ ಅವರು ಯುವಕರು ಉತ್ಸಾಹ ದಿಂದಒಳ್ಳೆಯ ಸಂಘಟನೆ ಮಾಡಿ ಅದ್ಭುತ ಕಾರ್ಯಕ್ರಮ ಮಾಡಿರುವುದು ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಗದಗ ವಾಣಿಜ್ಯೋದ್ಯಮಿ ಪ್ರಶಸ್ತಿ ಪುರಸ್ಕöÈತ ವೀರಣ್ಣ ಹಾಲಪ್ಪ ಪವಾಡದವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಈರಣ್ಣ ನವಲಗುಂದ ಪ್ರಭು ಬೆಳವಗಿ ಪ್ರಭಣ್ಣಾ ಪವಾಡದ.ಬಸಣ್ಣ ಮುಂಡರಗಿ ನಾಗರಾಜ್ ಬೆಳವಗಿ ಪ್ರಭು ನೂಲ್ವಿ. ನಿಂಗಪ್ಪ ಮಾದನಹಳ್ಳಿ. ಸಿದ್ರಾಮಪ್ಪ ಪವಾಡದ. ವಿರೂಪಾಕ್ಷಪ್ಪ ಶಿರಹಟ್ಟಿ. ಎಂ ಕೆ ಮಾದ್ನಹಳ್ಳಿ. ಮುತ್ತಣ್ಣ ಬೆಳವಗಿ. ಸೂಗೀರಪ್ಪ ಹಲಗೂಡದ ಸಿದ್ದಣ್ಣ ಹರ್ತಿ. ನಿಂಗಪ್ಪ ಅಣ್ಣಿಗೇರಿ .ಅಶೋಕ ಹಲಗೋಡದ. ಶಿವು ನೂಲ್ವಿ ಈರಪ್ಪ ಮೂಲಿಮನಿ. ಗಂಗಾಧರ್ ನೂಲ್ವಿ. ಕಾಶಿ ನವಲಗುಂದ. ಅಧ್ಯಕ್ಷರು ಮತ್ತು ಸದಸ್ಯರು ನೀಲಕಂಠೇಶ್ವರ ಕ್ಷೇಮಾಭಿವೃದ್ದಿ ವಿವಿದೋದ್ದೇಶ ಸಂಸ್ಥೆ (ರಿ). ಶಿಗ್ಲಿಅಧ್ಯಕ್ಷರು ಮತ್ತು ಸದಸ್ಯರು ತರುಣ ಸಂಘದ ಸದಸ್ಯರು ಇದ್ದರು. ಪರಮೇಶ ತಡಹಾಳ ಕಾರ್ಯಕ್ರಮ ನಿರ್ವಹಿಸಿದರು.





























