Home ಜಿಲ್ಲೆ ಗಣೇಶ ರಥೋತ್ಸವ

ಗಣೇಶ ರಥೋತ್ಸವ


ನವಲಗುಂದಸೆ.೧೩: ಸ್ಥಳೀಯ ವಿನಾಯಕ ಪೇಟೆ ಗಣಪತಿ ದೇವಸ್ಥಾನದ ರಥೋತ್ಸವವು ಕಳೆದ ೬೪ ವರ್ಷಗಳಿಂದ ಸ್ಥಗಿತಗೊಂಡಿದ್ದ ಇತಿಹಾಸ ಪ್ರಸಿದ್ದ ಗಣೇಶ ರಥೋತ್ಸವವು ಪುನರಾರಂಭಗೊAಡು ಸೆ ೧೪ ಸೋಮವಾರ ದಿಂದ ೧೫ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದು ಗಣಪತಿ ದೇವಸ್ಥಾನ ಸಮಿತಿ ಸದಸ್ಯ ಈರಣ್ಣ ಚವಡಿ ತಿಳಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸೆ. ೧೪ ರಂದು ಪ್ರತಿಷ್ಠಾಪಿಸಿ ಎಂಟು ದಿನ ವಿವಿಧ ವಾಹನೋತ್ಸವದೊಂದಿಗೆ ಗಮನ ಸೆಳೆಯುತ್ತ ಒಂಬತ್ತನೇ ದಿನ ಸೆ ೨೨ ರಂದು ಗಣಪತಿ ರಥೋತ್ಸವದೊಂದಿಗೆ ಸಂಭ್ರಮಿಸುತ್ತಾನೆ.


ಮೊದಲ ದಿನ ಸಿಂಹ ವಾಹನ,ಎರಡನೇ ದಿನ ಮಯೂರ, ಮೂರನೇ ದಿನ ಮೂಷಕ, ನಾಲ್ಕನೇ ದಿನ ಅಶ್ವ, ಐದನೇ ದಿನ ನಂದಿ,ಆರನೇ ದಿನ ಗಂಡಭೇರುAಡ, ಏಳನೇ ದಿನ ಗಜ, ಎಂಟನೇ ದಿನ ಕಮಲವಾಹನನಾಗಿ ನಗರದಲ್ಲೆಲ್ಲ ಮೆರವಣಿಗೆ ಮೂಲಕ ಶ್ರೀ ಗಣೇಶ ದರ್ಶನ ನೀಡುತ್ತಾನೆ. ೯ನೇ ದಿನ ರಥಾರೂಢನಾಗಿ ವಿಜೃಂಭಿಸುತ್ತಾನೆ ಎಂದು ಅವರು ತಿಳಿಸಿದರು.


ವಿಜಯ ನಾಗಾವಿ ಮಾತನಾಡಿ ದಶಕಗಳಿಂದ ರಥೋತ್ಸವ ನಿಂತು ಹೋಗಿತ್ತು. ರಥದ ಭಾಗಗಳು ಶಿಥಿಲಗೊಂಡಿದ್ದವು. ಈಗ ಎಲ್ಲರ ಸಹಕಾರದಿಂದ ಕಮಿಟಿ ಸದಸ್ಯರು ಈ ರಥವನ್ನು ನವೀಕರಿಸಿಲಾಗಿದೆ. ಐತಿಹಾಸಿಕ ದೇವಸ್ಥಾನ ಇದಾಗಿರುವುದರಿಂದ ಇನ್ನೂ ದೇವಸ್ಥಾನದ ಅಭಿವೃದ್ಧಿ ಕಾರ್ಯನಡೆಯುತ್ತಿದೆ ದೇವಸ್ಥಾನ ಭಕ್ತರು ದೇವಸ್ಥಾನ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದರು.
ಬಸನಗೌಡ ಮುದಿಗೌಡ್ರ, ಸಂತೋಷ ನಾವಳ್ಳಿ, ನಿಂಗಪ್ಪ ಸುಳ್ಳದ, ವಿಠ್ಠಲ ಮೆಣಸಗಿ, ಶಂಬು ಸಿದ್ರಾಮಶೆಟ್ಟರ್, ಚನ್ನಪ್ಪ ಕೇಸರಪ್ಪನವರ, ಹುಚ್ಚಪ್ಪ ಭೋವಿ, ಆರ್ ಬಿ ದನಮಾರ, ಫಕ್ಕೀರೇಶ ಹೂಗಾರ, ಸಿದ್ದು ದಡೆಸೂರಮಠ, ಮಹಾಂತೇಶ ನಾಗಾವಿ, ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.