
ಬೀದರ: ಅಶೋಕ ಚಕ್ರವರ್ತಿ ಫೌಂಡೆಶನ್ ತೆಲಂಗಾಣ ವತಿಯಿಂದ ರಾಷ್ಟ್ರ ಮಟ್ಟದ ಟೈಕಾ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯನ್ನು ತೆಲಂಗಾಣದ ರಾಜಧಾನಿಯಾದ ಹೈದರಾಬಾದಿನ ಗಚ್ಚಿಬೌಲಿಯಲ್ಲಿ ಎರ್ಪಡಿಸಲಾಗಿದ್ದು ಅದರಲ್ಲಿ ಬೀದರಿನ ಕೃಷ್ಣ ಮಾರ್ಶಲ್ ಆರ್ಟ ಕರಾಟೆ ಸ್ಕೂಲ್ ನ ಶಿಕ್ಷಕರಾದ ಕೃಷ್ಣ ಅವರ ನೇತ್ರತ್ವದಲ್ಲಿ ಹತ್ತು ವಿಧ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಪಡೆದಿರುತ್ತಾರೆ.
ಈ ಸ್ಪರ್ದೆಯು ಫೈಟಾ ಮತ್ತು ಕುಮುಟಾ ಎನ್ನುವ ವಿಶಿಷ್ಟ ಸ್ಪರ್ದೆಯಾಗಿದ್ದು ಇದರಲ್ಲಿ ಕೃಷ್ಣ ಮಾರ್ಶಲ್ ಆರ್ಟ ಕರಾಟೆ ಸ್ಕೂಲ್‌ನ ವಿದ್ಯಾರ್ಥಿಗಳಾದ ನರೇಂದ್ರ ,ಕೃತಿಕಾ . ವಿಶೇಷ, ಬ್ರೌನ್ಸ ಮತ್ತು ಸಿಲ್ವರ್ ಪದಕ ಪಡೆದರೆ, ಹರಿಶ ,ಕೃತಿಕಾ, ಲಕ್ಷ್ಮಿ ಮಿಣಕಿ , ಐಶ್ವರ್ಯ, ಗೋಲ್ಡ್ ಮೆಡಲ್ ಪಡೆದು ಬೀದರ ಜಿಲ್ಲೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಕ್ಕಾಗಿ ಸಾಹಿತಿಗಳು, ಉಪನ್ಯಾಸಕರಾದ ಮಯುರ ಬಸವರಾಜ ಮತ್ತು ಸಾಹಿತಿ ರಮೇಶ ಬಿರಾದಾರ ಅವರು ಹರ್ಷ ವ್ಯಕ್ತ ಪಡಿಸಿ ಮಕ್ಕಳಿಗೆ ಅಭಿನಂಧಿಸಿದ್ದಾರೆ
ಈ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ತೆಲಗು ಸಿನಿಮಾ ನಟ ಎಂ ಸುಮನ್ ಅವರು ಉದ್ಘಾಟಿಸಿ ಮಾತನಾಡುತ್ತ ಕರಾಟೆ ಎನ್ನುವುದು ಚೈನಾದಲ್ಲಿ ಪ್ರಸಿದ್ದಿ ಪಡೆದರು, ದೇಶದಾದ್ಯಂತ ತಮ್ಮ ಸ್ವ ರಕ್ಷಣೆಗಾಗಿ ಗಂಡು ಹೆಣ್ಣು ಎನ್ನದೆ ಎಲ್ಲರೂ ಕಲಿಯುತಿದ್ದಾರೆ.
ಪ್ರಸ್ತುತ ಸಂದರ್ಭಗಳಲ್ಲಿ ವಿಶೇಷವಾಗಿ ಮಹಿಳೆಯರು ಮುಂದೆ ಬರುತ್ತಿರುವುದು ಸ್ವಾಗತಾರ್ಹ ಎಂದರು,
ಇದರಿAದ ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯ ಸದೃಡನಾಗುತ್ತಾನೆ, ಅಲ್ಲದೆ ಏಕಾಗ್ರತೆ ಮತ್ತು ತಾಳ್ಮ ಬೆಳೆಯುತ್ತದೆ ಎಂದು ನುಡಿದಿರುತ್ತಾರೆ.
ವೇದಿಕೆ ಮೇಲೆ ಇನ್ನೂಳಿದ ಅಥಿತಿಗಳು ಕೂಡಾ ಕರಾಟೆ ಮಹತ್ವದ ಬಗ್ಗೆ ಮಾತಾಡಿದರು. ಎಂದು ಕೃಷ್ಣ ಮಾರ್ಶೆಲ್ ಕರಾಟೆ ಸ್ಕೂಲ್ ನ ಶಿಕ್ಷಕರಾದ ಕೃಷ್ಣ ಅವರು ತಿಳಿಸಿರುತ್ತಾರೆ































