Home ಜಿಲ್ಲೆ ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ನೇತ್ರದಾನ ಕುರಿತು ಜಾಗೃತಿ ಕಾರ್ಯಕ್ರಮ ...

ಕೆಬಿಎನ್ ಆಸ್ಪತ್ರೆಯಲ್ಲಿ ನೇತ್ರದಾನ ಕುರಿತು ಜಾಗೃತಿ ಕಾರ್ಯಕ್ರಮ ಶ್ರೇಷ್ಠ ದಾನಗಳಲ್ಲಿ ನೇತ್ರದಾನಕ್ಕೆ ಪ್ರಮುಖಸ್ಥಾನ: ಡಾ.ಗುರುಪ್ರಸಾದ

ಕಲಬುರಗಿ: ನೇತ್ರದಾನ ಶ್ರೇಷ್ಟದಾನಗಳಲ್ಲಿ ಒಂದಾಗಿದ್ದು, ನೇತ್ರ ದಾನ ಮಾಡಿದರೆ ಇನ್ನೊಬ್ಬರಿಗೆ ಬೆಳಕು ನೀಡಿದ ಬಹು ದೊಡ್ಡ ಸಹಾಯ ಮಾಡಿದಂತಾಗುತ್ತದೆ ಎಂದು ಕೆಬಿಎನ್ ವಿವಿಯ ಮೆಡಿಕಲ್ ಡೀನ್ ಡಾ. ಗುರುಪ್ರಸಾದ ಹೇಳಿದರು.
ಕೆಬಿಎನ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ರಾಷ್ಟೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೆಬಿಎನ್ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಜನರಿಗೆ ಪರಿಚಯಿಸಬೇಕು ಎಂದರು. ಕೆಬಿಎನ್ ನೇತ್ರ ಬ್ಯಾಂಕಿಗೆ ಯಾವಾಗ ಬೇಕಾದರೂ ಸಂಪರ್ಕಿಸಬಹುದು ಎಂದರು.
ಮೆಡಿಕಲ್ ಸೂಪೇರಿಟೆಂಡೆಂಟ್ ಡಾ. ಸಿದ್ದಲಿಂಗ ಚೆಂಗಟಿ ಮಾತನಾಡಿ, ನೇತ್ರದಾನ ಅವಶ್ಯ. ಅದು ಬೇರೊಬ್ಬರ ಜೀವನದಲ್ಲಿ ಬೆಳಕು ನೀಡುತ್ತದೆ. ಆದ್ದರಿಂದ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಆದ್ಯತೆ ಎಂದರು. ಕಣ್ಣಿನ ವಿಭಾಗಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಡಾ. ಪಿಎಸ್ ಶಂಕರ ಮಾತನಾಡಿ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮವನ್ನು ನಾವು ಪ್ರತಿವರ್ಷ ಆಚರಿಸುತ್ತೇವೆ. ಕೆಬಿಎನ್ ನೇತ್ರ ಬ್ಯಾಂಕ್ ದಿನದ 24 ಗಂಟೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ಯಾವಾಗಲೂ ಸಕ್ರಿಯವಾಗಿದೆ. ತುರ್ತು ಪರಿಸ್ಥಿತಿ ಯಾವಾಗಲೂ ಆಗಮಿಸಬಹುದು, ಹಾಗಾಗಿ ನಾವು ನೇತ್ರದಾನ ಸಂಬಂಧ ಯಾವಾಗಲೂ ಸಜ್ಜಾಗಿರಬೇಕು ಎಂದರು.
ವಿಭಾಗದ ಮುಖ್ಯಸ್ಥೆ ಡಾ. ಸಂಗೀತಾ, ನೇತ್ರದಾನದ ಬಗ್ಗೆ ಇರುವ ತಪ್ಪು ಕಲ್ಪನೆ, ಅಂಧ ವಿಶ್ವಾಸ ಬಿಟ್ಟು ಬಿಡಿ. ಸಾವು ಸಂಭವಿಸಿದ 8 ಘಂಟೆಗಳೂಳಗೆ ನೇತ್ರ ದಾನ ಮಾಡಬೇಕು. ನಿಮ್ಮ ಸ್ನೇಹಿತರು, ಸಂಬoಧಿಕರಲ್ಲಿ ಹೇಳಿ ಎಂದರು. ಡಾ. ಶ್ರೀಜಾ ಇವರು ನೇತ್ರ ದಾನದ ಮಹತ್ವ ತಿಳಿಸಿ ನೇತ್ರದಾನಕ್ಕೆ ಪ್ರೇರೆಪಿಸಿದರು. ಪ್ರಬಂಧ ಹಾಗೂ ಪೆÇೀಸ್ಟರ್ ಪ್ರಸ್ತುತಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.ನೇತ್ರದಾನದ ಮಹತ್ವ ತಿಳಿಸಲು ವಿದ್ಯಾರ್ಥಿಗಳಿಂದ ಸ್ಕಿಟ್ ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಧಿಕಾ, ಕಣ್ಣಿನ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸನಾ ಹುಸ್ಸೇನಿ, ಡಾ. ಪ್ರಾಣೇಶ್ ಕುಲಕರ್ಣಿ, ಡಾ. ಅಭಿಷೇಕ ಕುಲಕರ್ಣಿ , ಡಾ. ಶಿಲ್ಪಾ, ಡಾ. ವಜಿಹಾ, ಡಾ. ಅಫ್ರೀನ, ಡಾ. ಝೆಬಾ, ಡಾ. ಅಮೋಘ, ಹಾಜರಿದ್ದರು.

ದ್ರಷ್ಟಿ ಹೀನನಾಗಿದ್ದ ನಾನು, ಕೆಬಿಎನ್ ಆಸ್ಪತ್ರೆಯಲ್ಲಿ ಕಾರ್ನಿಯ ರಿಪ್ಲೇಸಮೆಂಟ ಮಾಡಿಸಿಕೊಂಡು ಈಗ ದೃಷ್ಟಿ ಪಡೆದದ್ದು ಜಗತ್ತನ್ನು ನೋಡುವಂತೆ ಮಾಡಿದೆ. ಬೇರೆ ಆಸ್ಪತ್ರೆಯಲ್ಲಿ ಆಗಿದ್ದರೆ ಅತಿ ಹೆಚ್ಚಿನ ವೆಚ್ಚ ಭರಿಸಬೇಕಾಗಿತ್ತು, ಆದರೆ ನನ್ನ ಪರಿಸ್ಥಿತಿ ಅರಿತು ಕಡಿಮೆ ವೆಚ್ಚದಲ್ಲೇ ಅತಿ ಕಠಿಣ ಶಸ್ತ್ರ ಚಿಕಿತ್ಸೆ ಮಾಡಿ ಬೆಳಕನ್ನು ನೀಡಿದ ಡಾ ಅಭಿಷೇಕ ಹಾಗೂ ಕೆಬಿಎನ್ ಆಸ್ಪತ್ರೆಗೆ ಧನ್ಯವಾದಗಳು.