Home ಜಿಲ್ಲೆ ಕಲಬುರಗಿ ರಾಜ್ಯ ವಕ್ಫ್ ಮಂಡಳಿಯ 368ನೇ ಬೋರ್ಡ್ ಸಭೆ, ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ

ರಾಜ್ಯ ವಕ್ಫ್ ಮಂಡಳಿಯ 368ನೇ ಬೋರ್ಡ್ ಸಭೆ, ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ

ಬೆಂಗಳೂರು: ಸುಪ್ರಸಿದ್ದ ಗುಲಬರ್ಗಾದ ದರ್ಗಾ ಹಜರತ್ ಖ್ವಾಜಾ ಬಂದಾ ನವಾಜ್ (ರಹ.) ಅವರ ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಗೌರವಾನ್ವಿತ ಅಧ್ಯಕ್ಷರಾದ ಹಜರತ್ ಡಾ. ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ಕಿಬ್ಲಾ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಕ್ಫ್ ಮಂಡಳಿ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ 368ನೇ ಬೋರ್ಡ್ ಸಭೆ ಯಶಸ್ವಿಯಾಗಿ ಜರುಗಿತು.
ಈ ಮಹತ್ವದ ಸಭೆಯಲ್ಲಿ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್ ಅವರು ಭಾಗವಹಿಸಿದ್ದರು.
ಸಭೆಯಲ್ಲಿ ಬೋರ್ಡ್‍ನ ಇತರ ಸದಸ್ಯರಾದ ಎನ್.ಎ. ಹ್ಯಾರಿಸ್, ಶ್ರೀಮತಿ ಕನೀಜ್ ಫಾತಿಮಾ, ಶ್ರೀಮತಿ ಸಾರಾ ಫಾತಿಮಾ, ಅಡ್ವೊಕೇಟ್ ಆಸಿಫ್ ಅಲಿ, ಅಬ್ದುಲ್ ರಿಯಾಜ್ ಖಾನ್, ಅನ್ವರ್ ಬಾಷಾ, ಖಾಲಿದ್ ಅಹ್ಮದ್, ಮೌಲಾನಾ ಸೈಯದ್ ಮೊಹಿಯುದ್ದೀನ್ ಹುಸೈನಿ ಪೀರ್‍ಜಾದಾ ಹಾಗೂ ಮೀರ್ ಕಾಸಿಂ ಅಬ್ಬಾಸ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಸಿಇಒ ಇಲಿಯಾಸ್ ಅಹ್ಮದ್ ಅಸ್ಮದಿ, ಅಫ್ಜಲ್ ಪಾಷಾ ಸೇರಿದಂತೆ ಇತರ ಅಧಿಕಾರಿಗಳು ಹಾಗೂ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ವಕ್ಫ್‍ಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳು ಹಾಗೂ ವಿವಿಧ ವಿಚಾರಗಳ ಕುರಿತು ವಿವರವಾದ ಚರ್ಚೆ ನಡೆಸಲಾಯಿತು. ವಕ್ಫ್ ಆಸ್ತಿಗಳ ನಿರ್ವಹಣೆ ಹಾಗೂ ಸಂಬಂಧಿತ ಕಾರ್ಯಗಳ ಕುರಿತು ಹಲವು ವಿಷಯಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾನ್ವಿತ ಅಧ್ಯಕ್ಷರು ಹಾಗೂ ಸಂಬಂಧಪಟ್ಟ ಸಚಿವರು ಹಲವು ಮಹತ್ವದ ನಿರ್ದೇಶನಗಳನ್ನು ಸ್ಥಳದಲ್ಲೇ ನೀಡಿದರು. ವಕ್ಫ್ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಸೂಚನೆಗಳನ್ನು ನೀಡಲಾಯಿತು.