
ಸೇಡಂ, ಸೆ,02:ಮಾನವ ಬದುಕಿನ ಸೋಪಾನ ಶ್ರಾವಣ ಸರಣಿ ಸತ್ಸಂಗ-16 ರ ಪ್ರವಚನ ಕಾರ್ಯಕ್ರಮವು ಸೇಡಮ್ ನಗರದ ಶರಣ ಶ್ರೀ ಗುಂಡೂರಾವ್ ಅಲ್ಲೂರ್ ಸರಳ ನಗರ(Uಖಿಅಐ) ಅವರ ನಿವಾಸದಲ್ಲಿ ಭಕ್ತಿ ಪೂರ್ವಕವಾಗಿ ಜರುಗಿತು.ಸೇಡಮ್ ನಗರದ ಆರಾಧ್ಯ ದೈವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯರಾದ ಡಾ.ಸದಾಶಿವ ಸ್ವಾಮಿಗಳು ಪ್ರವಚನದಲ್ಲಿ ಪ್ರಸಾದಿಸ್ಥಲವು ಆಧ್ಯಾತ್ಮಿಕ ಸಾಧನೆಯ ಮೂರನೇ ಹಂತವಾಗಿದ್ದು, ಈ ಹಂತದಲ್ಲಿ ಪ್ರಸಾದವು ಕೇವಲ ದೇವಸ್ಥಾನದಲ್ಲಿ ಕೊಡುವ ಆಹಾರವಲ್ಲ, ಇದು ಭಗವಂತ ನಮಗೆ ಕೊಡುವ ತನು- ಮನ- ಧನ – ಕಾಯ ಎಲ್ಲವೂ ಆಗಿದೆ ಎನ್ನುತ್ತಾ, ಭಕ್ತನು ಶುದ್ಧ ಕಾಯಕದಿಂದ ಗಳಿಸಿದ್ದ ತನು -ಮನ- ಧನಗಳನ್ನು ಎಲ್ಲವೂ ಭಗವಂತ ನೀಡಿದ ಪ್ರಸಾದವಾಗಿದ್ದು, ಪೂಜ್ಯರು ಮುಂದುವರೆದು ಭಗವಂತ ನಮಗೆ ಕರುಣಿಸಿದ ಎಲ್ಲವೂ ಪ್ರಸಾದವಾಗಿದೆ ಎನ್ನುತ್ತಾ, ಭಗವಂತ ನಮಗೆ ನೀಡಿದ ದೇಹವು ಸಹಿತ ಪ್ರಸಾದ ಕಾಯವಾಗಿದೆ ಎಂದರು.ನಾವು ಸಂಪಾದಿಸಿದೆಲ್ಲವೂ ಶಿವನು ನಮಗೆ ಕರುಣಿಸಿದ್ದು ಎನ್ನುವ ನಿರಹಂಕಾರದ ಭಾವನೆಗೆ ಶರಣರು ತೋರಿಸಿದ ಪ್ರಸಾದಿ ಜೀವನ ವಿಧಾನ ಎಂದರು.ಶರಣ ಶ್ರೀ ಗುಂಡೂರಾವ್ ಅಲ್ಲೂರ್ ಸರಳ ನಗರ(Uಖಿಅಐ) ಅವರ ನಿವಾಸದಲ್ಲಿ ಭಕ್ತಿ ಪೂರ್ವಕವಾಗಿ ಆಯೋಜಿತ ಸರಣಿ ಸತ್ಸಂಗ-16ರ ಕಾರ್ಯಕ್ರಮದಲ್ಲಿ ಪೂಜ್ಯರು ಆಧ್ಯಾತ್ಮದ ಮೂರನೇ ಹಂತವಾದ ಪ್ರಸಾದಿ ಸ್ಥಲದಲ್ಲಿ ಭಕ್ತನು ಪ್ರಸಾದಿ ಆಗುತ್ತಾನೆ ಎಂದರು.ಶರಣ ರಾಜಣ್ಣ ಬಳಗಾರ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಶರಣ ಬಾಳಿ ಅವರ ವಚನ ಗಾಯನದ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು.






























