Home ಜಿಲ್ಲೆ ಮಂಗಳೂರು ಕಾಸರಗೋಡು : ಟ್ಯಾಂಕರ್ – ಸ್ಕೂಟರ್ ನಡುವೆ ಅಪಘಾತ – ದ್ವಿಚಕ್ರ ಸವಾರ ಮೃತ್ಯು

ಕಾಸರಗೋಡು : ಟ್ಯಾಂಕರ್ – ಸ್ಕೂಟರ್ ನಡುವೆ ಅಪಘಾತ – ದ್ವಿಚಕ್ರ ಸವಾರ ಮೃತ್ಯು

ಕಾಸರಗೋಡು- ನಗರದ ಎಂ.ಜಿ. ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು ತಳಂಗರ ಬಾಂಗೋಡ್ ನ ಹನೀಫ್ (೫೫) ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ಹೊಸ ಬಸ್ ನಿಲ್ದಾಣದಿಂದ ಹಳೆಯ ಬಸ್ ನಿಲ್ದಾಣದ ಕಡೆ ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ನಿಂದ ರಸ್ತೆಗೆ ಬಿದ್ದ ಹನೀಫ್ ಅವರ ಕಾಲಿನ ಮೇಲೆ ಲಾರಿ ಹರಿದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿದರು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹಾಗೂ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹನೀಫ್ ಅವರು ಗುರುವಾರ ಬೆಳಗ್ಗೆ ಮೃತಪಟ್ಟರು. ಹನೀಫಾ ಅವರು ಬಿ.ಸಿ. ರಸ್ತೆಯ ವಿದ್ಯಾನಗರದಲ್ಲಿರುವ ಫ್ಲಕ್ಸ್ ಅಂಗಡಿಯ ಮಾಲೀಕರಾಗಿದ್ದರು.
ಉಡುಪಿ : ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಉಡುಪಿ-ಮೀನುಗಾರರೊಬ್ಬರು ಮೀನುಗಾರಿಕೆ ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಆಗಸ್ಟ್ ೧೯ರಂದು ನಡೆದಿದೆ. ಮೃತರನ್ನು ಬೈಂದೂರಿನ ಮರವಂತೆ ಗ್ರಾಮದ ನಾಗರಾಜ ಖಾರ್ವಿ(೪೦) ಎಂದು ಗುರುತಿಸಲಾಗಿದೆ.
ಇವರು ಬೆಳಗ್ಗೆ ಮರವಂತೆ ಬಂದರಿನಿಂದ ದೋಣಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದು, ದೋಣಿ ಸುಮಾರು ೨೦೦ ಮೀಟರ್ ಸಮುದ್ರ ದಲ್ಲಿ ಹೋಗುತ್ತಿರುವಾಗ ಒಮ್ಮೆಲೇ ಜೋರಾಗಿ ಗಾಳಿ ಬೀಸಿತೆನ್ನಲಾಗಿದೆ. ಇದರ ಪರಿಣಾಮ ದೋಣಿಯು ನೀರಿನಲ್ಲಿ ತೇಲಾಡಿದ್ದು ಇದರಿಂದ ನಾಗರಾಜ ಖಾರ್ವಿ ಆಯತಪ್ಪಿ ದೋಣಿಯಿಂದ ನೀರಿಗೆ ಬಿದ್ದರು.
ತೀವ್ರವಾಗಿ ಅಸ್ವಸ್ಥಗೊಂಡ ನಾಗರಾಜ ಖಾರ್ವಿಯನ್ನು ಇತರ ಮೀನು ಗಾರರು ಕೂಡಲೇ ಮೇಲಕ್ಕೆತ್ತಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ನಾಗರಾಜ ಖಾರ್ವಿ ಮೃತಪಟ್ಟಿರುವು ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.