
ಕಲಬುರಗಿ,ಆ.14-ಫರಹತಾಬಾದ ಪೆÇಲೀಸ್ ಠಾಣಾ ವ್ಯಾಪ್ತಿಯ “ಬಿ” ರೌಡಿ ಶೀಟರ್ ಗಜಾನನ ತಂದೆ ಅರುಣ ಕುಮಾರ್ ದೇಶಪಾಂಡೆ (37)ಯನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ನಗರದ ರಾಮಮಂದಿರ ಹತ್ತಿರದ ಕರುಣೇಶ್ವರ ನಗರ ನಿವಾಸಿಯಾದ ಗಜಾನನ ದೇಶಪಾಂಡೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದು, ಈತನ ವಿರುದ್ಧ ಕಲಬುರಗಿ ನಗರ ಮತ್ತು ಕಲಬುರ್ಗಿ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ವಿವಿಧ ಕಲಂ ಗಳ ಅಡಿಯಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ. ಆರೋಪಿಯು ರೂಢಿಗತ ಅಪರಾಧಿಯಾಗಿದ್ದು ಈತನ ವಿರುದ್ಧ 2013 ರಿಂದ 2026 ರ ವರೆಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 4 ಪ್ರಕರಣಗಳು, ಭಾರತೀಯ ನ್ಯಾಯ ಸಂಹಿತೆ-2023 ರ ಅಡಿಯಲ್ಲಿ 01 ಪ್ರಕರಣ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿವೆ. ಸದರಿ ಆರೋಪಿತನು ದರೋಡೆ, ಕೊಲೆ, ಕೊಲೆಗೆ ಪ್ರಯತ್ನ, ಮಾರಣಾಂತಿಕ ಆಯುಧದಿಂದ ಗಲಭೆ ಮಾಡುವುದು, ಬಾಂಡ್ ಮೇಲೆ ಬಿಡುಗಡೆಗೊಂಡು ನ್ಯಾಯಾಲಯಕ್ಕೆ ಹಾಜರಾಗುವಲ್ಲಿ ವಿಫಲರಾಗುವುದು, ದರೋಡೆ ಮಾಡುವ ಉದ್ದೇಶಕ್ಕಾಗಿ ಅಕ್ರಮ ಕೂಟ ರಚಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಆಯುಧಗಳಿಂದ ಮಾರಣಾಂತಿಕ ಹಲ್ಲೆ ಮಾಡುವುದು, ತಮ್ಮ ದುಷ್ಕøತ್ಯಗಳ ಮೂಲಕ ಮುಗ್ಧ ಜನರ ಮೇಲೆ ಪ್ರಭಾವ ಬೀರಿ ಸಾಮಾನ್ಯ ಜನರ ಶಾಂತಿ, ಭಂಗವನ್ನುಂಟು ಮಾಡುವುದು ಹಾಗೂ ಸಾರ್ವಜನಿಕರ ನೆಮ್ಮದಿಗೆ ಕಂಟಕ ಪ್ರಾಯವಾಗಿದ್ದು ಕಾನೂನು ವ್ಯವಸ್ಥೆಗೆ ದಕ್ಕೆ ತರುವಂತ ಚಟುವಟಿಕೆಯಲ್ಲಿ ಭಾಗವಹಿಸುವುದು ಮತ್ತು ಘೋರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುತ್ತಾನೆ. ಪೆÇಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ.ಅವರ ನಿರ್ದೇಶನದ ಮೇರೆಗೆ ಆರೋಪಿತನ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಕಾನೂನಿನ ಬಗ್ಗೆ ಸೂಕ್ತ ಗೌರವ ಹೊಂದುವಂತೆ, ಮನವರಿಕೆ ಮಾಡಿಕೊಡಲು, ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಈತನನ್ನು ಗಡಿಪಾರು ಮಾಡುವುದು ಸೂಕ್ತ ಮತ್ತು ಅನಿವಾರ್ಯವಾದದ್ದು ಎಂದು ಫರಹತಾಬಾದ ಪೊಲೀಸ್ ಠಾಣೆ ಪಿ.ಐ. ಹುಸೇನ್ ಭಾಷಾ ಅವರು ಕರ್ನಾಟಕ ಪೆÇಲೀಸ್ ಕಾಯ್ದೆ 1963 ಕಲಂ 55 (ಎ), 55(ಬಿ) ರ ಅಡಿಯಲ್ಲಿ ಗಡಿಪಾರು ಮಾಡಲು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಉಪ-ಪೊಲೀಸ್ ಆಯುಕ್ತರಾದ ಶಾಲೂ ಹಾಗೂ ನಗರದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯವರ ನ್ಯಾಯಾಲಯ ವಿಚಾರಣೆ ಕೈಗೊಂಡು ರೌಡಿ ಶೀಟರ್ ಗಜಾನನ ತಂದೆ ಅರುಣಕುಮಾರ ದೇಶಪಾಂಡೆಯನ್ನು 01ವರ್ಷದ ಅವಧಿಗೆ ದಿನಾಂಕ: 03-08-2016 ರಿಂದ 02-08-2027 ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.






























