
ಕಲಬುರಗಿ: ನಗರದ ತಾವರಗೇರಾ ಕ್ರಾಸ್ ಹತ್ತಿರವಿರುವ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿರುವುದನ್ನು ಪತ್ತೆ ಹಚ್ಚಿ ಆತನನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹವಾಗಿದ್ದು, ಕೂಡಲೇ ಕಸಾಯಿಖಾನೆಯನ್ನು ಸೀಜ್ ಮಾಡಬೇಕು ಮತ್ತು ನಗರದಲ್ಲಿ ಬಾಂಗ್ಲಾ ಪ್ರಜೆಗಳು ವಾಸಿಸುತ್ತಿರುವ ಶಂಕೆ ಇದ್ದು, ಅಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಉಪಾಧ್ಯಕ್ಷ ಶಿವಕುಮಾರ ಸಾಗರ, ರಾಜು ವಾಘಮೋರೆ, ಪ್ರಶಾಂತ ಸಿರೂರ, ಅಂಕುಶ ಭೋಸಲೆ, ಉದಯ ಸುಲ್ತಾನಪೂರ, ವಿರೇಶ ಭಿಂಗೆ, ಶರಣು ಶಿರೂರ, ಸಂಗಮೇಶ ಕಾಳನೂರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.






























