Home ಜಿಲ್ಲೆ ಕಲಬುರಗಿ ಕೋಡ್ಲಿ ವಸತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ- ಪಾಲಕರ ಸಭೆ

ಕೋಡ್ಲಿ ವಸತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ- ಪಾಲಕರ ಸಭೆ

ಕಲಬುರಗಿ,ಆ.8-ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ಹಾಗೂ ಪೆÇೀಷಕರ ಸಭೆ ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ರಾಜಶೇಖರ್ ಮಾಂಗ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಶಿಕ್ಷಕರ ಜೊತೆಗೆ ಪೆÇೀಷಕರು ಸಹ ಕೈ ಜೋಡಿಸಬೇಕು.ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಆಗಾಗ ಬಂದು ಚರ್ಚಿಸಬೇಕು. ಪೆÇೀಷಕರ ನಿರೀಕ್ಷೆಯಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸರಕಾರದಿಂದ ಬರುವ ಎಲ್ಲಾ ಸೌಲಭ್ಯ ಗಳನ್ನು ನೀಡಲಾಗುತ್ತಿದೆ. ಕಳೆದ ಸಾಲಿನ ಎಸ್. ಎಸ್. ಎಲ್ ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇಕಡಾ ನೂರು ಫಲಿತಾಂಶ ಬಂದಿದೆ.ಈ ವರ್ಷ ಕೂಡ ಪ್ರತಿಶತ ಫಲಿತಾಂಶ ಪಡೆಯಲು ಅನೇಕ ಯೋಜನಗಳು ಹಾಕಿಕೊಳ್ಳಲಾಗಿದೆ.ಅದರ ಭಾಗವಾಗಿ ಮಕ್ಕಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ಮೇಳ ಆಯೋಜಿಸಲಾದೆ ಎಂದರು.
ಪಾಲಕರಾದ ಮೀನಾಕ್ಷಿ ಸುರೇಶ ಬಡಿಗೇರ್ ಮಾತನಾಡಿ ಕೋಡ್ಲಿ ವಸತಿ ಶಾಲೆಯಲ್ಲಿ ಸುರಕ್ಷತೆಯ ಜೊತೆಗೆ ನಮ್ಮ ಮಕ್ಕಳಿಗೆ ಉತ್ತಮವಾದ ಊಟೋಪಚಾರ, ಅಭ್ಯಾಸ ದೊರೆಯುತ್ತಿದೆ.ಎಲ್ಲಾ ಸಿಬ್ಬಂದಿಗಳು ಒಳ್ಳೆಯರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಪೆÇೀಷಕ ಪ್ರತಿನಿಧಿ ಜಗನ್ನಾಥ ತಾಂಡೂರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವೀರಭದ್ರಪ್ಪ ಓತಿ,ಮಾಣಿಕ ಕೊಡದೂರ, ನಾಗಶೆಟ್ಟಿ, ಗೋಪಾಲದಾಸ್ ಸಾಹುಕಾರ್, ರೇಖಾ ಸೇರಿಕಾರ, ಮಹಾನಂದ, ಕವಿತಾ, ತುಕಾರಾಂ ಚವ್ಹಾಣ ,ಮಹೇಶ್ ಜಿ, ಶಿವಕುಮಾರ್ ಹಿರೇಮಠ,ಅಶೋಕ, ಜ್ಯೋತಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ಪಾಲಕರು ಉಪಸಿತರಿದ್ದರು.
ರೇವಣಸಿದ್ದಯ್ಯ ಹಿರೇಮಠ ನಿರೂಸಿದರು. ಅಶೋಕ ಹಡಪದ ಸ್ವಾಗತಿಸಿದರು. ಶಿವಾನಂದ ಬೀಳಗಿ ವಂದಿಸಿದರು.