Home Lead News ಕೇಂದ್ರದಿಂದ ಒಪ್ಪಂದ ಉಲ್ಲಂಘನೆ: ಸಿಜೆಪಿ ಆರೋಪ, ಪ್ರತಿಭಟನೆ ಎಚ್ಚರಿಕೆ

ಕೇಂದ್ರದಿಂದ ಒಪ್ಪಂದ ಉಲ್ಲಂಘನೆ: ಸಿಜೆಪಿ ಆರೋಪ, ಪ್ರತಿಭಟನೆ ಎಚ್ಚರಿಕೆ

ನವದೆಹಲಿ, ಜು.27-ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಮಾಡಿಕೊಂಡಿರುವ ಒಪ್ಪಂದವನ್ನು ಉಲ್ಲಂಪಿಸಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ), ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಪ್ರತಿಭಟನಾಕಾರರ ವಿರುದ್ಧದ ಪೊಲೀಸರ ಕ್ರಮ ಇನ್ನೂ ಮುಂದುವರಿಯಲು ಅವಕಾಶ ನೀಡಲಾಗಿದೆ ಎಂದು ಸರ್ಕಾರದ ವಿರುದ್ಧ ಇಂದು ವಾಗ್ದಾಳಿ ನಡೆಸಿದೆ.


ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಜೆಪಿ ನಾಯಕರು,ಜುಲೈ 25 ರಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕುರಿತಂತೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ 49 ದಿನಗಳಿಂಸ ನಡೆಸುತ್ತಿದ್ದ ಹೋರಾಟವನ್ನು ಅಂತ್ಯಗೊಳಿಸಿದ್ದೆವು. ಆದರೆ ಸರ್ಕಾರ ಒಪ್ಪಂದವನ್ನು ಪಾಲಿಸುತ್ತಿಲ್ಲ. ಹೀಗಾಗಿ ದೇಶವ್ಯಾಪಿ ಹೋರಾಟವ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್ ಐಆರ್ ವಾಪಸ್ ಪಡೆದು ಮತ್ತು ಹೊಸದಾಗಿ ಪ್ರಕರಣಗಳು ದಾಖಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ತಕ್ಷಣ ಎಫ್ ಐಆರ್ ವಾಪಸ್ ಪಡೆಯುವ ಗೌರವಿಸುವಲ್ಲಿ ವಿಫಲವಾಗಿದೆ. ಬದಲಾಗಿ ವಿದ್ಯಾರ್ಥಿಗಳನ್ನು ಬಂಧಿಸುವುದನ್ನು ಮುಂದುವರಿಸುವುದರ ಜೊತೆಗೆ, ಸ್ವಯಂಸೇವಕರನ್ನು ಕಣ್ಗಾವಲು ಮತ್ತು ಕಿರುಕುಳಕ್ಕೆ ಒಳಪಡಿಸಲಾಗುತ್ತಿದೆ ಎಂದು ಸಿಜೆಪಿ ಆರೋಪಿಸಿದೆ.


ಜುಲೈ 25ರಂದು ಮಾತುಕತೆ ಅನುಸಾರ ನಮಗೆ ಲಿಖಿತ ರೂಪ ಪ್ರತಿ ಸಿಗದಿದ್ದರೆ, ಮತ್ತೆ ಪ್ರತಿಭಟನೆ ಪುನರಾರಂಭಿಸಬೇಕಾಗುತ್ತದೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆಯಿಂದಾಗಿ ಎರಡು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದು ಸಿಜೆಪಿ ಮತ್ತು ಕೇಂದ್ರ ಸರ್ಕಾರದ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.