Home ಜಿಲ್ಲೆ ಕಲಬುರಗಿ ಅಭಿವೃದ್ಧಿ ಕಾಮಗಾರಿಗೆ ಜನರ ಸಹಕಾರ ಅಗತ್ಯ: ಅಲ್ಲಮಪ್ರಭು

ಅಭಿವೃದ್ಧಿ ಕಾಮಗಾರಿಗೆ ಜನರ ಸಹಕಾರ ಅಗತ್ಯ: ಅಲ್ಲಮಪ್ರಭು

ಕಲಬುರಗಿ:ಜು.3:ಸರ್ಕಾರದ ಅನುದಾನದಿಂದ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರು ಕೂಡ ಕಾಮಗಾರಿಗೆ ಅಡಚಣೆ ಉಂಟುಮಾಡದೆ, ಗುಣಮಟ್ಟದ ಕೆಲಸ ಆಗುವಂತೆ ಮೇಲ್ವಿಚಾರಣೆ ವಹಿಸಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ನಗರದ ಸಂತೋಷ ಕಾಲೋನಿಯಲ್ಲಿ ಸಿಎಂಐಡಿಪಿ ಯೋಜನೆಯಡಿ 50 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಮಗಾರಿ ಕಳಪೆಯಾಗಿದೆಯೆಂದು ಜನರು ದೂರು ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಲು ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದ ‘ಅಕ್ಕನ ಬಳಗ’ದ ಸದಸ್ಯೆಯರು, ತಮ್ಮ ಸಂಘದ ಹೆಸರಿನಲ್ಲಿರುವ ನಿವೇಶನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್, ಶೀಘ್ರದಲ್ಲೇ ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯ ಶಂಕರಸಿಂಗ್, ರಾಜಶೇಖರ ಮುನ್ನೋಳಿ, ವಾಸುದೇವ ಪಾಟೀಲ್, ಮಾಣಿಕರಾವ್ ದಣ್ಣೂರ, ಶ್ರೀಶೈಲ್ ಮೂಲಗೆ, ಮಂಜುನಾಥ್ ವಗ್ಗಿ .ಉಮೇಶ್ ಹತ್ತಿ .ಸುಧಾಕರ ಜಗದಾಳೆ, ಸೌದಾಗರ, ಶಂಕರ, ಬಸವರಾಜ ಕಣ್ಣೂರ, ಸುಭಾಷ ಕಣ್ಣಿ, ಪವನ ಕಣ್ಣೂರ, ಸಹದೇವ ದೊಡ್ಮನಿ ನಂದೂರ, ಕಿರಿಯ ಅಭಿಯಂತರ ಸಂದೀಪ ಪಾಟೀಲ್ ಹಾಗೂ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.