
ನವಲಗುಂದ,ಜೂ೩೦ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಬಹಳ ಮಹತ್ವವಿದೆ. ಇಡೀ ರಾಜ್ಯದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ನಾಗರಿಕರು ನಿಮ್ಮ ಮತದಾನವನ್ನು ಭದ್ರಪಡಿಸಿಕೊಳ್ಳಬೇಕು’ ಎಂದು ಸಹಾಯಕ ಮತದಾರ ನೋಂದಣಾಧಿಕಾರಿ ಹಾಗೂ ಹುಬ್ಬಳ್ಳಿ ಧಾರವಾಡ ನಗರಾಭಿರುದ್ದಿ ಪ್ರಾಧಿಕಾರ ಆಯುಕ್ತರಾದ ದೇವರಾಜ ಹೇಳಿದರು.
ವಿವಿಧ ಇಲಾಖೆಗಳ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕುರಿತು ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಮತದಾರರ ಮ್ಯಾಪಿಂಗ್ ಕಾರ್ಯವನ್ನು ಬಿಎಲ್ಒಗಳು ನಿರಂತರವಾಗಿ ಮಾಡುತ್ತಿದ್ದಾರೆ. ಎಸ್ಐಆರ್ ಯಶಸ್ವಿಯಾದರೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಒಬ್ಬ ಮತದಾರರ ಹೆಸರು ಮೂರು ನಾಲ್ಕು ಕಡೆ ದಾಖಲಿಸುವುದು ಕಾನೂನು ಬಾಹಿರವಾಗಲಿದೆ ಎಂದು ತಿಳಿಸಿದರು.
ತಹಶೀಲ್ದಾರ ಸುಧೀರ್ ಸಾಹುಕಾರ ಮಾತನಾಡಿ ಮತಗಟ್ಟೆ ಅಧಿಕಾರಿಗಳು ಜೂನ್ ೩೦ ರಿಂದ ಜೂಲೈ ೨೯ ರವರಗೆ ಮತದಾರರ ಮನೆ ಮನೆಗೆ ಬಂದು ಮತದಾರರ ನೋಂದಣಿಯ ನಮೂನೆಯ ೨ ಪ್ರತಿಗಳನ್ನು ಸಲ್ಲಿಸುತ್ತಿದ್ದು, ಸದರಿ ನಮೂನೆಗಳಲ್ಲಿ ತಮಗೆ ಸಂಬAಧಿಸಿದ ನಿಖರ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಒಂದು ಪ್ರತಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ಕೊಡಲು ಹಾಗೂ ಒಂದು ಪ್ರತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಹಾಗೂ ಸದರಿ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಪ್ರಚುರಪಡಿಸಿದ ನಂತರ ಅದನ್ನು ವೀಕ್ಷಿಸಿ ಏನಾದರೂ ನ್ಯೂನ್ಯತೆಗಳು ಕಂಡು ಬಂದಲ್ಲಿ ಮನವಿಯ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯಾಧಿಕಾರಿ ಎಸ್ ಪಿ ಪೂಜಾರ, ಸಿಪಿಐ ರವಿಕುಮಾರ ಕಪ್ಪತ್ತನವರ ಮಾತನಾಡಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾಸಾಗಿ ಮಾಡಲ್ ಹೈಸ್ಕೂಲ್ ಆವರಣದಲ್ಲಿ ಮುಕ್ತಾಯಗೊಂಡಿತು.
ಜಗದೀಶ್ ಹಡಪದ, ಸಾಗರ ಶಿರಬಡಗಿ,ಗಾಯತ್ರಿದೇವಿ ಪಾಟೀಲ್, ಪಿಎಸ್ಐ ಜನಾರ್ಧನ ಭಟ್ರಳ್ಳಿ, ಎಸ್ ಎಸ್ ಹಿರೇಗೌಡ್ರ, ಎನ್ ವಿ ಕುರವತ್ತಿಮಠ, ಅಜಯ ಆಯಿ, ಅಕ್ಕಮಹಾದೇವಿ ಬಣಗಾರ, ರವಿ ವಿಶ್ವಜ್ಞ, ದಾವಲಸಾಬ ಮಸೂತಿ, ಪಪುö್ಪ ಜೈನ, ವಿಜಯ ಕುಲಕರ್ಣಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.




























