Home ಜಿಲ್ಲೆ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ; ಗ್ರಾ.ಪಂ. ಎದುರು ಪ್ರತಿಭಟನೆ

ಕುಡಿಯುವ ನೀರಿನ ಸಮಸ್ಯೆ; ಗ್ರಾ.ಪಂ. ಎದುರು ಪ್ರತಿಭಟನೆ

ಮಾಲೂರು ಜೂ.೩೦: :ತಾಲ್ಲೂಕಿನ ಮಡಿವಾಳ ಗ್ರಾ.ಪಂ.ನ ಚೊಕ್ಕಂಡಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.


ಚೊಕ್ಕೊಂಡಹಳ್ಳಿ ಗ್ರಾಮದಲ್ಲಿ ೩ ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ನೀರಿಗೆ ತುಂಬಾ ತೊಂದರೆಯಾಗಿದ್ದು,ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಿದರು ನೀರಿಗೆ ಪರಿಹಾರ ಒದಗಿಸಿಕೊಡಲಿಲ್ಲ.ಆದ್ದರಿಂದ ಗ್ರಾಮಸ್ಥರು ಎಲ್ಲಾ ಸೇರಿ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.


ಪಿಡಿಒ ಕಾಶಿನಾಥ್ ಮಾತನಾಡಿ,ಚೊಕ್ಕಂಡಹಳ್ಳಿ ಗ್ರಾಮದಲ್ಲಿ ಕುಡಿಯವ ನೀರಿನ ಕೊಳವೆ ಭಾವಿಯನ್ನು ಕೊರೆಸಲಾಗಿದ್ದು, ನೀರುಸಿಗಲಿಲ್ಲ, ಆದ ಕಾರಣ ಖಾಸಗಿ ಕೊಳವೆ ಬಾವಿಯಿಂದ ನೀರನ್ನು ಸರಬರಾಜು ಮಾಡುತ್ತಿದ್ದು, ನೀರು ಸಕಾಗಾದ ಕಾರಣ ಟ್ಯಾಂಕರ್ ಮೂಲಕ ಇಂದಿನಿಂದ ತಾತ್ಕಾಲಿಕವಾಗಿ ನೀರು ಪೂರೈಸಲಾಗುವುದು ನಂತರ ಕೊಳವೆ ಭಾವಿ ಕೊರೆಯಿಸಿ ಸಮರ್ಪಕ ನೀರು ಸಬರಾಜು ಮಾಡಲಾಗುವುದು ಎಂದರು. ನಂತರ ಪ್ರತಿಭಟನೆಯನ್ನು ಹಿಂಪಡೆದರು.


ಗ್ರಾ.ಪಂ. ಮಾಜಿ ಸದಸ್ಯ ಸಿ.ಎಂ.ವೆಂಕಟೇಶ್, ನಂದಕುಮಾರ್, ರವಿಚಂದ್ರನ್, ಮುನಿರಾಜು, ಶ್ರೀನಿವಾಸ್, ನಾರಾಯಣ ಚಾರಿ, ರಾಮಣ, ಗಣೇಶ್, ಮುರಳಿ, ಮಂಜುನಾಥ್ ಆಚಾರಿ, ಬಸಪ್ಪ, ಮಂಜುನಾಥ್, ಇನ್ನಿತರರು ಹಾಜರಿದ್ದರು.