Home ಜಿಲ್ಲೆ ಸಿದ್ಧರಾಮೇಶ್ವರ ವೈದ್ಯಕೀಯ ಕಾಲೇಜು: ಯೋಗ ದಿನಾಚರಣೆ

ಸಿದ್ಧರಾಮೇಶ್ವರ ವೈದ್ಯಕೀಯ ಕಾಲೇಜು: ಯೋಗ ದಿನಾಚರಣೆ

ಬೀದರ್: ಇಲ್ಲಿಯ ನೌಬಾದ್‌ನ ಶ್ರೀ ಸಿದ್ಧರಾಮೇಶ್ವರ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಾಮೂಹಿಕ ಯೋಗಾಭ್ಯಾಸ ಮಾಡಿದರು.
ಕಾಲೇಜು ಪ್ರಾಚಾರ್ಯ ಡಾ. ರೂಪೇಶ ಎಕಲಾರಕರ್, ಸಿದ್ಧಲಿಂಗೇಶ್ವರ ಫಾರ್ಮಸಿ ಕಾಲೇಜು ಪ್ರಾಚಾರ್ಯ ರಾಜಕುಮಾರ ಬಿರಾದಾರ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.