
ಕಲಬುರಗಿ,ಜೂ.4- ನಗರದ ಶಾಹಬಜಾರದ ಶೇಖ ರೋಜ ಕಾಲೋನಿಯ ಅಲ್ ಅಮೀನ್ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಿರುವ ಆಳವಾದ ತೆರದ ಚರಂಡಿ ಶಾಲಾ ಮಕ್ಕಳನ್ನು ಅಪಾಯಕ್ಕೆ ತಳ್ಳುತ್ತಿದೆ. ಒಂದುವೇಳೆ ಆಯಾ ತಪ್ಪಿ ಬಿದ್ದಲ್ಲಿ ಪ್ರಾಣಪಾಯ ತಪ್ಪಿದ್ದಲ್ಲ.
ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯ ಚಿಕ್ಕ ಮಕ್ಕಳಿದ್ದು, ಶಾಲೆಗೆ ಹೊಂದಿಕೊಂಡಿರುವ ಆಳವಾಗಿರುವ ತೆರೆದ ಚರಂಡಿಯಲ್ಲಿ ನೀರು ನಿಂತು, ಕಸಕಡ್ಡಿ ಪ್ಲಾಸ್ಟಿಕ್ ಪೆಪರ್ ಸಿಲುಕಿ ಗೊಬ್ಬು ದುರ್ವಾಸನೆ ಬೀರುತ್ತಿದೆ. ಶಾಲೆ ಪ್ರಾರಂಭವಾಗಿದ್ದು, ದಿನ ನಿತ್ಯ ಮಕ್ಕಳು ಇಲ್ಲಿನ ಈ ತೆರೆದ ಚರಂಡಿಯ ಅಕ್ಕಪಕ್ಕದಿಂದಲೆ ಹಾದು ಹೋಗುತ್ತಾರೆ ಮಕ್ಕಳು ಆಯಾ ತಪ್ಪಿದರೆ ಚರಂಡಿಗೆ ಬಿದ್ದು ಮುಳುಗುವ ಅಪಾಯವಿದೆ.
ಇಲ್ಲಿನ ತೆರೆದ ಚರಂಡಿ ಕಾಮಗಾರಿ ಪೂರ್ಣ ಗೊಳಿಸದೇ ಇರುವುದರಿಂದ ಮಳೆ ಮತ್ತು ಸುತ್ತಲಿನ ಕಸಕಡ್ಡಿ, ಚರಂಡಿನೀರು ಇಲ್ಲಿ ಶೇಖರಣೆಗೊಂಡು ಶಾಲಾ ಮೇದಾನಕ್ಕೂ ಚರಂಡಿ ನೀರು ನುಗ್ಗುತ್ತಿದೆ.
ಮಕ್ಕಳ ಹಿತದೃಷ್ಠಿಯಿಂದ ಹಾಗೂ ಅಪಾಯದ ಮುಂಜಾಗ್ರತೆಯನ್ನು ಅರಿತು ಈ ಕೂಡಲೇ ಇಲ್ಲಿನ ತೆರೆದ ಚರಂಡಿಯ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ತಕ್ಷಣವೇ ಅಲ್ಲಿಯ ವರೆಗೂ ತಾತ್ಕಾಲಿಕವಾದ ಪರ್ಯಾಯ ಮಾರ್ಗವನ್ನಾದರು ಅಳವಡಿಸಿ ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸುವಂತೆ ಅಲ್ ಅಮೀನ್ ಎಜುಕೇಶನಲ್ ಸೂಸೈಟಿ ಬೆಂಗಳೂರು ಉಪಾಧ್ಯಕ್ಷರಾದ ಶೇಖ್ ಮಹ್ಮದ ಜಿಯಾವುದ್ದೀನ್ ಅವರು, ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.























