Home ಜಿಲ್ಲೆ ಕಲಬುರಗಿ ಅವರಾದ (ಬಿ):ಶಾಲಾ ಪ್ರಾರಂಭೋತ್ಸವ

ಅವರಾದ (ಬಿ):ಶಾಲಾ ಪ್ರಾರಂಭೋತ್ಸವ

ಕಲಬುರಗಿ,ಜೂ.2-2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವನ್ನು ಅವರಾದ (ಬಿ) ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ನೆರವೇರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚಿನಾಳ, ಶಿಕ್ಷಣ ಸಂಯೋಜಕ ಲಕ್ಷ್ಮಿಕಾಂತ್, ಸಿಆರ್‍ಪಿ ಶರಣು ಆಗಮಿಸಿ ಕಾರ್ಯಕ್ರಮಕ್ಕೆ ಹೆಚ್ಚಿನ ಚೈತನ್ಯ ತುಂಬಿದರು. ಎಲ್ಲ ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ, ಪುಷ್ಪ ವೃಷ್ಟಿ ಮಾಡುವ ಮೂಲಕ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ್ ಕುಮಾರ್ ಕಿವಡೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಪ ಪ್ರಾಂಶುಪಾಲ ಸಂತೋಷ ಕುಮಾರ, ಸರಕಾರಿ ಪ್ರೌಢಶಾಲೆ ಮುಖ್ಯಗುರು ಗೋಪಾಲ್ ಚೌಹಾನ್ ಆಗಮಿಸಿದ್ದರು. ಎಸ್‍ಡಿಎಂಸಿ ಸದಸ್ಯರಾದ ರೇವಣ್ಣಸಿದಪ್ಪ ಮಕರಬಿ ಹಾಗೂ ಇನ್ನಿತರ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ 2 ಜೊತೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ಸಾಂಕೇತವಾಗಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿದರು. ಶೇ. ಹತ್ತರಷ್ಟು ದಾಖಲಾತಿ ಹೆಚ್ಚು ಮಾಡಲು ಕಿವಿ ಮಾತು ಹೇಳಿದರು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಲ್ಲರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅದರಲ್ಲೂ ಈ ವರ್ಷದಿಂದ ದ್ವಿ ಭಾಷೆ ಪದ್ಧತಿಯಲ್ಲಿ ಪಾಠ ಬೋಧನೆಗಳು ಪ್ರಾರಂಭವಾಗುತ್ತಿದ್ದು ಎಲ್ಲರೂ ಅದಕ್ಕೆ ಅಣಿಯಾಗಿ ಕೆಲಸ ನಿರ್ವಹಿಸಲು ತಿಳಿಸಿದರು. ಶಾಲೆ ಮುಖಗಳು ಗುರುಗಳಾದ ಹೆಚ್ ಎಸ್ ಹಿರೇಮಠ ಮಾತನಾಡಿ, ಊರಲ್ಲಿ ಪ್ರಭಾತ್ ಪೇರಿ ಮಾಡುವ ಮೂಲಕ ಕರಪತ್ರ ನೀಡುವ ಮೂಲಕ ಬ್ಯಾನರ್ಗಳನ್ನ ಹಚ್ಚುವ ಮೂಲಕ ಶಿಕ್ಷಣ ಸೌಲಭ್ಯಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಿ 45 ಮಕ್ಕಳನ್ನು ದಾಖಲಾತಿ ಮಾಡಲಾಯಿತು. ಮಕ್ಕಳಿಗೆ ಸಿಹಿ ನೀಡುವ ಮೂಲಕ ಹಾಗೂ ಬಾಳೆಹಣ್ಣು, ಮೊಟ್ಟೆ ಕೊಡುವ ಮೂಲಕ ಸಾಂಕೇತಿಕವಾಗಿ ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು. ಪ್ರಹ್ಲಾದ ಕುಲಕರ್ಣಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕ ಜಗಪ್ಪ ವಂದಿಸಿದರು. ಶಿಕ್ಷಕರು ಹಾಗೂ ಬಿಸಿ ಊಟದ ಸಿಬ್ಬಂದಿ ಹಾಜರಿದ್ದರು.