Home Uncategorized ಮೇಲ್ಮಟ್ಟದ ಜಲಾಗಾರ ಬೇಡ

ಮೇಲ್ಮಟ್ಟದ ಜಲಾಗಾರ ಬೇಡ


ಲಕ್ಷೆ÷್ಮÃಶ್ವರ,ಮೇ.೨೨: ಶತಮಾನಗಳ ಇತಿಹಾಸವಿರುವ ಪುರಸಭೆ ಉಮಾಮ ವಿದ್ಯಾಲಯ ಮತ್ತು ಪುರಸಭೆ ಕಲಾಮಹ ವಿದ್ಯಾಲಯ ಮೈದಾನ ಸಂರಕ್ಷಣೆ ಮತ್ತು ಕಾಲೇಜಿನ ಆವರಣದಲ್ಲಿ ನಿರ್ಮಿಸುತ್ತಿರುವ ಮೇಲ್ಮಟ್ಟದ ಜಲಾಗಾರ ನಿರ್ಮಾಣ ವಿರೋಧಿಸಿ ಉಗ್ರ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.
ಎರಡು ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಪಟ್ಟಣದ ನಾಗರಿಕರ ಸಹಕಾರದೊಂದಿಗೆ ಒಂದು ಹೋರಾಟ ಸಮಿತಿ ಮಾಡಿ ಎರಡು ಸಂಸ್ಥೆಗಳನ್ನು ಬೆಳೆಸುವುದು ಮೈದಾನದ ರಕ್ಷಣೆ ಕಾಲೇಜ್ ಎದುರಿಗೆನ ಮೇಲ್ಮಟ್ಟದ ಜಲಗಾರ ನಿರ್ಮಾಣ ಇವುಗಳನ್ನು ತಡೆಗಟ್ಟಲು ರೂಪರೇಷೆ ಕೈಗೊಳ್ಳಲು ಸೇರಿದ್ದ ಸಮಾನ ಮನಸ್ಕರ ನಿರ್ಣಯ ಕೈಗೊಂಡಿತ್ತು.


ಪತ್ರಕರ್ತರ ಕಾರ್ಯಾಲಯದಲ್ಲಿ ಕರೆಯಲಾಗಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪುರಸಭೆ ಮಾಜಿ ಅಧ್ಯಕ್ಷ ಎಂಆರ್ ಪಾಟೀಲ್ ಮಹೇಶ ಹೊಗೆಸೊಪ್ಪಿ ನ ತಿಪ್ಪಣ್ಣ ಸಂಶಿ ಬಿಎಸ್ ಬಾಳೆಶ್ವರ್ ಮಠ ಸೋಮಣ್ಣ ಉಪನಾಳ ಅವರುಗಳು ಯಾವುದೇ ಸಂದರ್ಭದಲ್ಲಿ ಎಂಎ ಕಾಲೇಜಿನ ಆವರಣದಲ್ಲಿ ನಿರ್ಮಿಸುತ್ತಿರುವ ಮೇಲ್ಮಟ್ಟದ ಜಲಗಾರವನ್ನು ಸ್ಥಗಿತಗೊಳಿಸದಿದ್ದರೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಘೋಷಿಸಿದರು.

ಸಾವಿರಾರು ವಿದ್ಯಾರ್ಥಿಗಳನ್ನು ನೀಡಿದ ಹೆಮ್ಮೆಯ ಕಾಲೇಜಿನ ಮುಂದೆ ಯಾರದೋ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಅನುಮತಿ ನೀಡಿರುವುದು ಅತ್ಯಂತ ಖಂಡನೀಯ ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಮೇ ೩೦ರೊಳಗೆ ಅಂತಿಮ ನಿರ್ಧಾರ ಪ್ರಕಟಿಸದಿದ್ದರೆಹೊರ ಬಿಡದಿದ್ದರೆ ಮುಂದಾಗುವ ಯಾವುದೇ ಅನಾಹುತಕ್ಕೂ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶರಣು ಗೋಡಿ ಡಿಬಿ ಪಕೀರಪ್ಪ ರಾಮಣ್ಣ ಲಮಾಣಿ ಗಡಪ್ಪನವರ ನೀಲಪ್ಪಪಡಿಗೇರಿ ಪ್ರಕಾಶ ಕೊಂಚಿಗೇರಿ ಮಠ ಖಾನ್ ಸಾಬ್ ಸುರಣಿಗಿ ಇದ್ದರು.