Home ಜಿಲ್ಲೆ ಕಲಬುರಗಿ ರೌಡಿ ಶೀಟರ್ ಮೊಹ್ಮದ್ ಉಸ್ಮಾನ್ ಗಡಿಪಾರು

ರೌಡಿ ಶೀಟರ್ ಮೊಹ್ಮದ್ ಉಸ್ಮಾನ್ ಗಡಿಪಾರು

ಕಲಬುರಗಿ,ಮೇ.19-ನಗರದ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಮೊಹ್ಮದ್ ಉಸ್ಮಾನ್ ಅಲಿಯಾಸ್ ಉಸ್ಮಾನ್ ಸಾಬ್( 33) ನನ್ನು ಬಾಗಲಕೋಟೆ ಜಿಲ್ಲೆಯ ಬಾಗಲಕೋಟ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ನಗರದ ಶಹಾಬಜಾರ್ ಸನಾ ಮೊಹಲ್ಲಾ ನಿವಾಸಿಯಾದ ಈತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಆರೋಪಿ ರೂಢಿಗತ ಆಪಾದಿತನಾಗಿದ್ದು, “ಎ” ರೌಡಿ ಎಂದು ಗುರುತಿಸಲಾಗಿದೆ.
ಆರೋಪಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆರೋಪಿಯನ್ನು ಗಡಿಪಾರು ಮಾಡುವುದು ಸೂಕ್ತ ಎಂದು ಚೌಕ್ ಪೊಲೀಸ್ ಠಾಣೆ ಪಿಐ ಸುಶೀಲಕುಮಾರ ಅವರು ಕರ್ನಾಟಕ ಪೊಲೀಸ್ ಕಾಯ್ದೆ-1963 ಕಲಂ 55ರ ಆಕ್ಟ್ ಅಡಿಯಲ್ಲಿ ಗಡಿಪಾರು ಮಾಡಲು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಡಿಸಿಪಿ ಶಾಲೂ ಹಾಗೂ ನ್ಯಾಯಾಲದಯದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆರೋಪಿಯನ್ನು ಬಾಗಲಕೋಟ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.