Home ಜಿಲ್ಲೆ ಕಲಬುರಗಿ ಜಿಲ್ಲೆಯಲ್ಲಿ ಮೇ 25 ರವರೆಗೆ”ಜನ್ ಭಾಗೀದಾರಿ-ಸಬ್ಸೆ ದೋರ, ಸಬ್ಸೆ ಪೆಹ್ಲೆ” ಎಂಬ ವಿಶೇಷ ಐಇಸಿ ಅಭಿಯಾನ

ಜಿಲ್ಲೆಯಲ್ಲಿ ಮೇ 25 ರವರೆಗೆ”ಜನ್ ಭಾಗೀದಾರಿ-ಸಬ್ಸೆ ದೋರ, ಸಬ್ಸೆ ಪೆಹ್ಲೆ” ಎಂಬ ವಿಶೇಷ ಐಇಸಿ ಅಭಿಯಾನ

ಕಲಬುರಗಿ,ಮೇ.19:ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ವತಿಯಿಂದ ಜಿಲ್ಲೆಯಲ್ಲಿ ಮೇ 18 ರಿಂದ 25ರವರೆಗೆ ʼಜನ್ ಭಾಗೀದಾರಿ-ಸಬ್ಸೆ ದೋರ, ಸಬ್ಸೆ ಪೆಹ್ಲೆʼ ಎಂಬ ಆಂ-ಎಉUಂ (ಧರ್ತಿ ಅಭಾ ಜನ ಜಾಗೃತಿ ಗ್ರಾಮ ಉತ್ಕøರ್ಷ ಅಭಿಯಾನ) ಯೋಜನೆಯಡಿ ವಿಶೇಷ ಐಇಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 

  ಈ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಿತಿ ಚಂದ್ರಶೇಖರ ಅವರು ಮಾತನಾಡಿ, ಬುಡಕಟ್ಟು ಪರಿಶಿಷ್ಟ ಪಂಗಡದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ತಲುಪಿಸುವುದು ಮತ್ತು ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ಒದಗಿಸುವುದು ಅಭಿಯಾನದ ಉದ್ದೇಶವಾಗಿದೆ.    ಗ್ರಾಮ ಮಟ್ಟದಲ್ಲಿ ಜಾಗೃತಿ, ಜನರ ಕುಂದು ಕೊರತೆ ಆಲಿಕೆ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಆಯೋಜಿಸಲಾಗಿದ್ದು, ಜಿಲ್ಲೆಯ ಪರಿಶಿಷ್ಟ ಪಂಗಡದ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೊಗಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.