Home ಜಿಲ್ಲೆ ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ

ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ

ಲಕ್ಷ್ಮೇಶ್ವರ,ಏ22: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ಆದಿ ಶ್ರೀ ಶಂಕರಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬ್ರಾಹ್ಮಣ ಸಮಾಜದವರು ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ತಹಸೀಲ್ದಾರ ಧನಂಜಯ ಎಂ., ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಶಂಕರಾಚಾರ್ಯರರು ಜಗತ್ತಿನ ಎಲ್ಲ ಸಮಾಜದವರನ್ನು ಕೂಡಿಕೊಂಡು ಹೋಗುವ ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಸಮಾಜದಲ್ಲಿ ಬಿತ್ತುವ ಕಾರ್ಯಮಾಡಿದ್ದು, ಸಮಾನತೆಯ ತತ್ವವನ್ನು ಸಾರಿ ಹೇಳಿದ್ದರು. ತಮ್ಮ ಆಳವಾದ ಅಧ್ಯಯನದಿಂದ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಜ್ಞಾನವನ್ನು ಸಂಪಾದಿಸಿದ್ದ ಶ್ರೀಗಳ ಕೊಡುಗೆಗಳು ಭಾರತದ ಆಧ್ಯಾತ್ಮಿಕ ಮತ್ತು ತಾತ್ವಿಕವಾಗಿ ಈ ಜಗತ್ತಿನ ಮೇಲೆ ಶಾಶ್ವತವಾದ ಪ್ರಭಾವ ಬೀರಿವೆ. ಅಂತಹ ಮಹಾನ ಶ್ರೇಷ್ಠರನ್ನು ಒಂದೇ ಜಾತಿಗೆ ಸೀಮಿತಗೊಳಿಸುವದು ಬೇಡ, ಎಲ್ಲ ಜಾತಿಯ ಎಲ್ಲ ಧರ್ಮದವರಿಗೂ ಅವರು ನೀಡಿದ ಕೊಡುಗೆಗೆಗಳು ಸದಾ ಎಲ್ಲ ಕಾಲಕ್ಕೂ ಪ್ತಸ್ತುತ ಎಂದು ಹೇಳಿದರು.


ತಾಲೂಕ ಬ್ರಾಹ್ಮಣ ಸಮಾಜದಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ ಶಂಕರಾಚಾರ್ಯರನ್ನು ಭಾರತೀಯ ತತ್ವಶಾಸ್ತ್ರದ ಶ್ರೇಷ್ಠ ವ್ಯಕ್ತಿಯಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಕೇರಳದ ಒಂದು ಸಣ್ಣ ಹಳ್ಳಿಯಾದ ಕಾಲಡಿಯಲ್ಲಿ 788 ರಲ್ಲಿ ಜನಿಸಿದ ಆದಿ ಆದಿ ಶಂಕರಾಚಾರ್ಯರು ಅವರು 820 ರಲ್ಲಿ 32 ನೇ ವಯಸ್ಸಿನಲ್ಲಿ ನಿಧನರಾಗುವ ಮೊದಲು ಆಳವಾದ ಆಧ್ಯಾತ್ಮಿಕ ಮತ್ತು ಬೌದ್ಧಿಕ ಮೈಲಿಗಲ್ಲುಗಳನ್ನು ಸಾಧಿಸಿದರು. ಅವರ ಅಲ್ಪಾವಧಿಯ ಜೀವಿತಾವಧಿಯಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ನೀಡಿದ ಕೊಡುಗೆಯು ಅಪಾರವಾಗಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ಅವರ ಸ್ಮರಣೆಯನ್ನು, ಪ್ರಾರ್ಥನೆಗಳು, ಅವರ ಬೋಧನೆಗಳ ಕುರಿತಾದ ಪ್ರವಚನಗಳನ್ನು ನಡೆಸಲಾಗುತ್ತದೆ.


ಶಂಕರಾಚಾರ್ಯರು ಎಲ್ಲ ಜಾತಿಗಳು ಧರ್ಮಗಳು ಒಂದೇ ಎನ್ನುವ ನಿಟ್ಟಿನಲ್ಲಿ ಧರ್ಮ ಪ್ರಚಾರ ಮಾಡಿದರು, ಅದರಂತೆ ಲಿಂ.ಜ. ವೀರಗಂಗಾಧರ ಭಗವತ್ಪಾದರು ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಮೂಲಕ ಎಲ್ಲ ಧರ್ಮಗಳ ಸಾರವನ್ನು ಜಗತ್ತಿಗೆ ತಿಳಿಸುವ ಕಾರ್ಯ ಮಾಡಿದ್ದರು, ಜಗಜ್ಯೋತಿ ಬಸವಣ್ಣನವರು ಸಹ ಜಾತಿ ಜಾತಿಗಳ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸವiಸಮಾಜ ನಿರ್ಮಾಣಕ್ಕೆ ಶ್ರಮಿಸಿದರು, ಇಂತಹ ಅನೇಕ ಯುಗ ಪುರುಷರು ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್, ಅರವಿಂದ ದೇಶಪಾಂಡೆ, ಬಿ.ಕೆ.ಕುಲಕರ್ಣಿ,ದೃವರಾಜ ಬೆಟಗೇರಿ, ಸಾಹುಕಾರ, ರಾಘವೇಂದ್ರ ಪೂಜಾರ, ದಿಗಂಬರ ಪೂಜಾರ ಡಾ.ಪ್ರಸನ್ನ ಕುಲಕರ್ಣಿ, ಡಿ.ಪಿ.ಹೇಮಾದ್ರಿ, ಗುರುರಾಜ ಪಾಟೀಲಕುಲಕರ್ಣಿ, ಎಸ್.ಬಿ.ಅಣ್ಣಿಗೇರಿ, ಪ್ರಶಾಂತ ಕಿಮಾಯಿ, ರೇಣುಕಾ ಶಿರಹಟ್ಟಿ, ಪ್ರಶಾಂತ ಸನದಿ, ನಿರ್ಮಲಾ, ಹಾಗೂ ಕಚೇರಿ ಸಿಬ್ಬಂದಿಗಳು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.