Home ಜಿಲ್ಲೆ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ

ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ

ಬಾದಾಮಿ,ಏ22: ಸಮೀಪದ ಶಿವಯೋಗಮಂದಿರದ ಶ್ರೀಮದ್ವೀರಶೈವ ಶಿವಯೋಗಮಂದಿರ ಸಂಸ್ಥೆ ಮತ್ತು ಶ್ರೀ ಕುಮಾರೇಶ್ವರ ಸಂಸ್ಕøತ ಪಾಠಶಾಲೆ ಸಂಯುಕ್ತಾಶ್ರಯದಲ್ಲಿ ಭಕ್ತಿ ಭಂಡಾರಿ, ವಿಶ್ವಗಳು, ಕರ್ನಾಟದ ಮಾರ್ಟಿನ್ ಲೂಥರ್ ಕಿಂಗ್, ಕರ್ನಾಟಕ ಸಾಂಸ್ಕೃತಿಕ, ನಾಯಕ ಶ್ರೀ ಬಸವೇಶ್ವರರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚಲಿಸಲಾಯಿತು.


ಸಾನಿಧ್ಯ ವಹಿಸಿದ ಶಿವಯೋಗಮಂದಿರ ಸಂಸ್ಥೆಯ ಉಸ್ತುವಾರಿಯಾಗಿರುವ ಶರಣಬಸವ ಸ್ವಾಮಿಗಳು ಮಾತನಾಡಿ ಪ್ರಪಂಚದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೋಟ್ಟ ಮೊದಲಿಗೆ ಜಾರಿಗೆ ತಂದವರು ಬಸವಣ್ಣವರು. ಬಸವಣ್ಣನವರು ಸಮಾಜದ ಅತ್ಯಂತ ಹಿಂದುಳಿದ ದೀನ ದಲಿತರ ಬಾಳಿಗೆ ಬೆಳಕಾದರು. ಬಿದ್ದವರನ್ನು ಮೇಲೆ ಎತ್ತಲು ಶ್ರಮಿಸಿದರು. ಅಂತರಜಾತಿ ಮದುವೆಗೆ ಕಾರಣರಾದರು. ಪ್ರಪಂದಲ್ಲಿ ವೈಜ್ಞಾನಿಕ ಧರ್ಮವನ್ನು ಸ್ಥಾಪಿಸಿ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದರು ಮಹಾ ಮಾನವತಾವಾದಿ ಎಂದರು.


ಧರ್ಮದರ್ಶಿ ಎಂ.ಬಿ.ಹಂಗರಗಿ ಮಾತನಾಡಿದರು.
ಕುಮಾರೇಶ್ವರ ಸಂಸ್ಕೃತ ಪಾಠಶಾಲೆಯ ಶಿಕ್ಷಕರಾದ ಎಚ್.ವಾಯ್, ಮಣ್ಣಾಪುರ, ಪಿ.ಜೆ. ಶಿವಮಠ, ಡಿ.ಎಸ್. ಛಾವಿಕಟ್ಟ, ಕೆ.ಎಸ್. ಹಿರೇಮಠ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.