
ಮಾಲೂರು.ಏ೧೬:ತಾಲೂಕಿನ ಬಪ್ಪನಹಳ್ಳಿ ಗ್ರಾಮದ ರಾಮಮೂರ್ತಿ ದೀಪಾ ದಂಪತಿಗಳ ಪುತ್ರಿ ಮಾನ್ಯ ಆರ್ ಬೆಂಗಳೂರಿನ ಎಲೆಕ್ಟ್ರಾನ್ ಸಿಟಿ ಬಳಿ ಇರುವ ಶ್ರೀ ಚೈತನ್ಯ ಪಿಯು ಕಾಲೇಜಿನಲ್ಲಿ ೨೦೨೫ ೨೬ ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ೬೦೦ ಅಂಕಗಳಿಗೆ ೫೮೬ ಶೇಕಡಾ ೯೭.೬೭ ರಷ್ಟು ಅಂಕಗಳು ಪಡೆದು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈ ವಿದ್ಯಾರ್ಥಿನಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿರುವ ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ
























