ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ದೆಹಲಿಯಲ್ಲಿಂದು ರಾಜ್ಯದ ಕಾಂಗ್ರೆಸ್ ಶಾಸಕರುಗಳಾದ ಟಿ.ಬಿ. ಜಯಚಂದ್ರ, ಅಪ್ಪಾಜಿ.ಸಿ.ಎಸ್. ನಾಡಗೌಡ, ಯಶವಂತರಾಯ ಪಾಟೀಲ್, ಜೆ.ಟಿ. ಪಾಟೀಲ್, ಬಿ. ಶಿವಣ್ಣ, ಷಡಕ್ಷರಿ, ಶಾಂತಾನುಗೌಡ, ಪುಟ್ಟರಂಗಶೆಟ್ಟಿ, ಜಿ.ಎಸ್. ಪಾಟೀಲ್, ಮಹಂತೇಶ್ ಕೌಜಲಗಿ ರವರು ಭೇಟಿ ಮಾಡಿ ಮನವಿ ಮಾಡಿದರು.