Home ಜಿಲ್ಲೆ ಬೆಂಗಳೂರು ಅಂಬೇಡ್ಕರ್ ಜಯಂತಿ ಆಚರಣೆ

ಅಂಬೇಡ್ಕರ್ ಜಯಂತಿ ಆಚರಣೆ

ಬೆಂಗಳೂರು, ಏ. ೧೬- ನಗರದ ಮೈಸೂರು ರಸ್ತೆ ಆವಲಹಳ್ಳಿಯ ಪಟೇಲ್ ಗುಳ್ಳಪ್ಪ ಪದವಿ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್‌ರವರ ೧೩೫ನೇ ಜಯಂತಿಯನ್ನು ಆಚರಿಸಲಾಯಿತು.


ಶಿಕ್ಷಣ ತಜ್ಞ ಡಾ. ಬಿ.ಎಂ. ಪಟೇಲ್ ಪಾಂಡುರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ರವರು ತಾವು ಬಾಲ್ಯದಲ್ಲಿ ಅನುಭವಿಸಿದ ರೈಲು ಮತ್ತು ಎತ್ತಿನಗಾಡಿಯ ಪಯಣದಲ್ಲಿ ಆದ ಅವಮಾನದ ಗಾಯಗಳನ್ನು ಎಂದೂ ಮರೆಯಲಾಗದ ದುರ್ಘಟನೆಗಳೆಂದು ದಾಖಲಿಸಿದ್ದಾರೆ. ಈ ದೇಶದಲ್ಲಿ ಇಂತಹ ನೂರಾರು ಸಾಮಾಜಿಕ ಪಿಡುಗುಗಳಿಗೆ ಶೋಷಿತರ ಪರ ಧ್ವನಿಯಾಗಿ ಹೋರಾಟಗಳನ್ನು ರೂಪಿಸಿದಂತಹ ಹಾಗೂ ಹೋರಾಟಗಳಿಗೆ ಚೈತನ್ಯವನ್ನು ನೀಡಿದಂತಹ ಅಂಬೇಡ್ಕರ್ ರವರು ಇಲ್ಲದ ಈ ಭಾರತವನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದರು.


ವಿದ್ಯಾರ್ಥಿಗಳು ಅಂಬೇಡ್ಕರ್ ಹಾಗೂ ಗಾಂಧಿ ವಿಚಾರಧಾರೆಗಳೆರಿಗೆ ತಮ್ಮ ಚಿಂತನೆಗಳನ್ನ ಹರಿಸಬೇಕೆಂದರು ಅಂಬೇಡ್ಕರ್ ಅಸ್ಪೃಶ್ಯ ಜಾತಿಗಳ ನಾಯಕನೆಂಬ ಸೀಮಿತ ದೃಷ್ಟಿಕೋನವನ್ನು ಕಿತ್ತೆಸೆದು ಅಂಬೇಡ್ಕರ್ ಸರ್ವರಿಗಾಗಿ ಎಂದು ಮುಕ್ತ ಮನಸ್ಸಿನಿಂದ, ಯಾರಿಗೆ ಸಮಾನತೆಯಲ್ಲಿ ನಂಬಿಕೆ ಇದೆಯೋ ಅವರೆಲ್ಲರೂ ಕೂಡ ಅಧ್ಯಯನ ಮಾಡಬೇಕಾಗಿದೆ ಎಂದರು


ಕಾಲೇಜಿನ ಪ್ರಾಂಶುಪಾಲರಾದ ಚಿಕ್ಕಮ್ಮ ಅವರು ಸ್ವಾಗತ ಕೋರಿದರು ಶಿಕ್ಷಣ ಸಂಪನ್ಮೂಲ ವ್ಯಕ್ತಿ ಡಾ. ವೆಂಕಟರಮಣ ಸ್ವಾಮಿರವರು ಡಾ. ಅಂಬೇಡ್ಕರ್ ರವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಉಪನ್ಯಾಸಕರಾದ ಸಂಶುದ್ದೀನ್ ರವರು ಕಾರ್ಯಕ್ರಮ ನಿರೂಪಿಸಿದರು. ಹನುಮಂತ ರಾಯಪ್ಪ ಉಪನ್ಯಾಸಕರು ಉಪಸ್ಥಿತರಿದ್ದರು.